ಜಗ್ಗೇಶ್ ಕೊ ಗುಸ್ಸಾ ಕ್ಯೂಂ ಆತಾ ಹೈ

ಕೆಲವು ನಟರ ಚಿತ್ರಗಳು ಸುಮ್ಮನೇ ಅಬ್ಬರ ಮಾಡಿದರೂ ಅವುಗಳ ಮಾರುಕಟ್ಟೆಯ ಬೆಲೆ ಅಷ್ಟಕ್ಕಷ್ಟೇ. ಆದರೆ ತಮ್ಮ ಬಗ್ಗೆ ಹೆಚ್ಚು ಕೊಚ್ಚಿಕೊಳ್ಳದೆ, ನೆಚ್ಚಿಕೊಂಡ ನಿರ್ಮಾಪಕರನ್ನು ಉಳಿಸುವಂಥ ತಾಕತ್ತಿರುವ ಕೆಲವೇ ನಟರಲ್ಲಿ ನವರಸನಾಯಕ ಜಗ್ಗೇಶ್ ಕೂಡ ಒಬ್ಬರು. ಈ ಮಾತನ್ನು ಪುಷ್ಠೀಕರಿಸುತ್ತಿರುವುದು ಜಗ್ಗೇಶ್ ಅವರ ಮುಂಬರಲಿರುವ ಎರಡು ಚಿತ್ರಗಳು. ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಗ್ರಜ ಚಿತ್ರ ಬರೋಬ್ಬರಿ, ಮೂರು ಕೋಟಿಗಳ ಟಿವಿ ರೈಟ್ಸ್ ಬಾಚಿಕೊಂಡಿದ್ದರೆ ಅವರದ್ದೇ ನೀರ್ದೋಸೆ ಚಿತ್ರ ಎರಡೂ ಕಾಲು ಕೋಟಿ ಕಮಾಯಿಸಿದೆ. ಹಾಗಾಗಿ, ದೈಹಿಕವಾಗಿ ಜಗ್ಗೇಶ್ ತಮ್ಮ ತೂಕ ಕಳೆದುಕೊಳ್ಳುತ್ತಿದ್ದಾರೆ. ಆದರೆ ಅವರ ಚಿತ್ರಗಳು ತೂಕ ಹೆಚ್ಚಿಸಿಕೊಳ್ಳುತ್ತಿವೆ ಎನ್ನಬಹುದು. ಹಾಗೆ ನೋಡಿದರೆ ಜಗ್ಗೇಶ್ರ ಚಿತ್ರಗಳು ದೊಡ್ಡ ಮೊತ್ತಕ್ಕೆ ಸ್ಯಾಟಲೈಟ್ ರೈಟ್ಸ್ಗಳನ್ನು ಮಾರಿಕೊಂಡಿರುವುದು ದೊಡ್ಡ ಆಶ್ಚರ್ಯವೇನೂ ಅಲ್ಲ. ಸಿನಿಮಾ ಹೆಂಗಾದ್ರೂ ಇರಲಿ, ಆದರೆ ಇಂಥ ನಟ ಇದ್ದಾನಲ್ಲ ಸಾಕು, ನಾವು ಕೊಟ್ಟ ದುಡ್ಡಿಗೆ ಮೋಸವಾಗುವುದಿಲ್ಲ ಎಂದುಕೊಂಡು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವಂಥ ನಟ ಜಗ್ಗೇಶ್. ಮನರಂಜನೆಯ ವಿಷಯದಲ್ಲಿ ಜಗ್ಗೇಶ್ ಅವರಿಗಿಂಥ ಜನರನ್ನು ರಂಜಿಸಿದವರು ವಿರಳ. ಅದೀಗ ಮತ್ತೊಮ್ಮೆ ಪ್ರೂವ್ ಆಗಿದೆ ಅಷ್ಟೇ. ಚಿಕ್ಕಪುಟ್ಟ ಪಾತ್ರಗಳಿಂದ ಶುರು ಮಾಡಿ ಇಂದು ನವರಸನಾಯಕನ ಪಟ್ಟ ಅಲಂಕರಿಸಿರುವ ಜಗ್ಗೇಶ್ ನಿಜವಾದ ಫ್ಯಾಮಿಲಿ ಸ್ಟಾರ್. 6ರಿಂದ 60ವರೆಗೆ ಎಲ್ಲರಿಗೂ ಇಷ್ಟವಾಗುವ ಜಗ್ಗೇಶ್ ಚಿತ್ರಗಳಿಗೆ ಟಿವಿ ಚಾನೆಲ್ಗಳಲ್ಲಿ ಇಂದಿಗೂ ಬೇಡಿಕೆ ಜಾಸ್ತಿ. ಅದು ಟಿಆರ್ಪಿ ತಂದುಕೊಡುವ ಮೂಲ. ಹಾಗಾಗಿ, ಚಾನೆಲ್ಗಳು ಅವರ ಎರಡು ಹೊಸ ಚಿತ್ರಗಳನ್ನು ಎರಡೂ ಕೈಯಿಂದ ಬಾಚಿಕೊಂಡಿವೆ. ಇದೇನೋ ಖುಷಿಯ ವಿಷಯವೇ, ಹಾಗಂತ ಮನೆಯಲ್ಲೇ ಕೂತು ಸಿನಿಮಾ ನೋಡಿದರೆ ಅದು ಜಗ್ಗೇಶ್ಗೆ ಸಿಟ್ಟು ತರಿಸುವ ಕೆಲವು ವಿಷಯಗಳಲ್ಲೊಂದು, ಟಿವಿ ರೈಟ್ಸ್ಗೆ ಒಳ್ಳೆಯ ಬೆಲೆ ಸಿಕ್ಕಿದ್ದರೂ, ಮನೆಯಲ್ಲಿ ಕುಂತು ಸಿನಿಮಾ ನೋಡುವವರಿಗೆ ಜಗ್ಗೇಶ್ ಲೆಫ್ಟ್ ಅಂಡ್ ರೈಟ್ ತೆಗೆದುಕೊಳ್ಳುತ್ತಾರೆ ಎಂಬುದು ನೆನಪಿರಲಿ, ಅಷ್ಟೇ. ಆಮೇಲೆ ಜಗ್ಗೇಶ್ ಕೊ ಗುಸ್ಸಾ ಕ್ಯೂ ಆತಾ ಹೈ ಎಂದು ಕೇಳುವಂತಿಲ್ಲ.
-ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


