ಏನ್ ಲಿರಿಕ್ಕು, ಏ ಕ್ಯಾ ಕಿರಿಕ್ಕು

ಇತ್ತೀಚೆಗೆ ತಾನೇ ದುನಿಯಾ ವಿಜಯ್ಗೆ 'ರಿಂಗ್ ರೋಡ್ ಶುಭಾ' ಚಿತ್ರದಲ್ಲಿ ಏನ್ ಕೆಲ್ಸ ಅನ್ನೋದರ ಬಗ್ಗೆ ಒಂದು ವರದಿ ಓದಿದ್ದಿರಿ. ಈಗ ವಿಜಿ ಈ ಸಿನಿಮಾದ ಶೂಟಿಂಗ್ನಲ್ಲಿ ಫುಲ್ ಟೈಮ್ ಕಾಣಿಸಿಕೊಳ್ಳುತ್ತಾ ಇರೋದರ ಡೀಟೈಲ್ ಇದು. ಏಕ್ ಸಾಂಗು, ಏಕ್ ಫೈಟು ಎನ್ನುತ್ತಾ ವಿಜಿ ಅವರೇನೋ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ.
ಆದರ ಅವರ ಹಾಡು ಕೇಳಿದವರು 'ಏನ್ ಲಿರಿಕ್ಕು, ಏ ಕ್ಯಾ ಕಿರಿಕ್ಕು' ಎಂಬ ಸಾಲುಗಳನ್ನು ಆಡಿಕೊಳ್ಳುತ್ತಿರುವುದು ಮತ್ತು ಹಾಡಿಕೊಳ್ಳುತ್ತಿರುವುದು ಸ್ಪೆಷಲ್.
ಕಳೆದ ಶುಕ್ರವಾರ ಮಲ್ಲೇಶ್ವರಂನ ಮಾರ್ಕೆಟ್ನಲ್ಲಿ ವಿಜಿ ಫೈಟಿಂಗ್ ಸೀನ್ನಲ್ಲಿ ಮೈ ಝಳಪಿಸುತ್ತಿದ್ದರು. ಅಲ್ಲಿಗೆ ನವರಸನಾಯಕ ಜಗ್ಗೇಶ್ ಕೂಡ ಭೇಟಿ ನೀಡಿದ್ದರು ಎಂಬುದು ವಿಶೇಷ. ಆದರೆ ಅದಕ್ಕಿಂತ ವಿಶೇಷ ಸುದ್ದಿ ಇರೋದು ಇದಕ್ಕೂ ಮುಂಚೆ ಚಿತ್ರೀಕರಣಗೊಂಡಿರುವ 'ಪಾಂ ಪಾಂ ಪಕ್ಕದ್ಮನೆ ಪಾರ್ವತಮ್ನೋರೇ' ಎನ್ನುವ ಹಾಡಿನಲ್ಲಿ.
ಈ ಚಿತ್ರದಲ್ಲಿ ವಿಜಿ ಅವರ ಪರ್ಸನಲ್ ಲೈಫಿನ ವಿವಾದದ ಸ್ಪರ್ಶ ಇದೆ ಎಂಬ ಹಲವರ ಗುಮಾನಿಗೆ ಈ ಹಾಡು ಇಂಬು ಕೊಡುವಂತಿದೆ. ಆದರೆ ವಿಚಿತ್ರ ಎಂದರೆ ಇನ್ನೊಬ್ಬರಿಗೆ ಆಡಿಕೊಳ್ಳುವ ಅವಕಾಶ ಕೊಡದೆ 'ಒಂದ್ ಛಾನ್ಸ್ ಕೊಡಿ, ನಾನೇ ಹೇಳ್ಕೊಂಡ್ಬಿಡ್ತೀನಿ' ಎನ್ನುವಂತೆ 'ನಮ್ ಮನೆ ವಿಷ್ಯ ವಸಿ ಹೇಳ್ತೀನ್ ಕೇಳ್ಸ್ಕೊಳ್ರಿ, ನೀವಂದ್ಕೊಂಡಂಗೆ ನಮ್ ಮನೆ ಮ್ಯಾಟ್ರ್ ಎಲ್ಲಾ ನೆಟ್ಗಿಲ್ರೀ, ಮುನಿಸ್ಕೊಂಡೆ ಮಲಗವ್ಳೆ ನನ್ ಹೆಂಡ್ತಿ ಯಾಕಂತ ಒಂಚೂರ್ ಕೇಳ್ಬನ್ರಿ' ಎಂದು ಹಾಡುತ್ತಿದ್ದಾರೆ ವಿಜಿ.
ದುನಿಯಾ ವಿಜಯ್ ಎಂದರೆ ಕೇವಲ ತಮ್ಮ ಸಿಕ್ಸ್ಪ್ಯಾಕ್ ದೇಹವನ್ನು ಎಕ್ಸ್ಪೋಸ್ ಮಾಡುವುದರಲ್ಲಿ ಫೇಮಸ್ ಎಂದುಕೊಂಡವರಿಗೆ ಅಚ್ಚರಿಯಾಗುವಂತೆ, 'ಕದ್ದು ಮುಚ್ಚಿ ನಡೆಯೋ ಗಲಾಟೇಲಿ ಮಜಾ ಇಲ್ರೀ, ಸಂಸಾರ ಬೀದಿಗ್ ಬಂದ್ರೆ ಬಿಟ್ಟಿ ಸಿನಿಮಾರೀ' ಎನ್ನುವಷ್ಟರ ಮಟ್ಟಿಗೆ ತಮ್ಮ ವೈಯಕ್ತಿಕ ಬದುಕನ್ನು ತಾವೇ ಎಕ್ಸ್ಪೋಸ್ ಮಾಡಿಕೊಳ್ಳುವಷ್ಟು ಬೋಲ್ಡ್ ಆಗಿದ್ದಾರೆ ವಿಜಯ್.
ಇದರ ಜೊತೆಗೆ, 'ಕಿಂಡಿಯಿಂದ ನಮ್ ಕಡೆ ನೋಡೋದ್ ಕಡಿಮೆ ಮಾಡ್ರೀ, ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಮಧ್ಯೆ ಕಡ್ಡಿ ಆಡ್ಸೋ ಕೆಲಸ ನಿಮ್ಗೆ ಬೇಕಾ, ನೀವು ಅಂದ್ಕೊಂಡಂಗಿಲ್ಲಿ ಯಾವ ಸೀನೂ ನಡೆಯಲ್ರೀ' ಎನ್ನುತ್ತಾ ಪಕ್ಕದ್ಮನೆ ದೋಸೆಯ ತೂತಿನಲ್ಲಿ ಇಣುಕಿ ನೋಡುವವರಿಗೆ ಹಿತೋಪದೇಶ ಕೂಡ ಕೊಟ್ಟಿದ್ದಾರೆ ಅವರು.
ಇನ್ನು ಅವರ ಪರ್ಸನಲ್ ಲೈಫಿಗೆ ಕೈ ಹಾಕಿ ಪರ ಪರ ಎಂದು ಕೆರೆದವರ ಮೇಲೂ ವಿಜಿ ತಮ್ಮ ಸಿಟ್ಟು ತೀರಿಸಿಕೊಂಡಂತಿದೆ ಎನಿಸುವುದು 'ನಿಮ್ ಮನೆ ವಿಷ್ಯ ನಮ್ ಕಣ್ಣಿಗ್ ಬಿತ್ತಲ್ರೀ, ಮನೆ ಮುರಿಯೋ ಕೆಲಸ ಇವ್ರಿಗೆ ಬಿಡ್ರೀ' ಎಂಬ ಸಾಲುಗಳನ್ನು ನೋಡಿದಾಗ. ಹಾಡಿನ ಚಿತ್ರೀಕರಣದಲ್ಲಿ ಈ ಸಾಲುಗಳು ಬಂದಾಗ ವಿಜಯ್ ಯಾರ ಕಡೆಗೆ ಕೈ ಮಾಡಿ ತೋರಿಸುತ್ತಾರೆ ಅನ್ನೋದು ಸಸ್ಪೆನ್ಸ್. ಅದನ್ನು ತಿಳಿದುಕೊಳ್ಳಬೇಕು ಎಂದರೆ ನೀವು ಇನ್ನೆರಡು ದಿನಗಳಲ್ಲಿ ಯೂ ಟ್ಯೂಬ್ನಲ್ಲಿ ಬಿಡುಗಡೆಯಾಗಲಿರುವ ಈ ಹಾಡಿನ ವಿಡಿಯೋ ನೋಡಬೇಕು.
ಅಂತೂ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಹೊಸ ಹುಡುಗಿಯರ ಸೈನ್ಯ ಜೋರಾಗಿಯೇ ಇದೆ. ಉತ್ಸಾಹದ ತುತ್ತ ತುದಿಯಲ್ಲಿರುವ ರಿಂಗ್ರೋಡ್ ಶುಭಾ ತಂಡ ಸದ್ಯಕ್ಕೆ ಬಿಂದಾಸ್ ಮೂಡಿನಲ್ಲಿದೆ. ಚಿತ್ರದ ಎಷ್ಟು ಭಾಗ ಚಿತ್ರೀಕರಣ ಆಗಿದೆ ಎಂಬ ಕುತೂಹಲಕ್ಕೆ ಸದ್ಯದಲ್ಲೇ ಆಶ್ಚರ್ಯಕರ ಉತ್ತರ ಸಿಗಬಹುದೇನೋ.
ಪಾಂ ಪಾಂ ಪಕ್ಕದ್ಮನೆ ಪಾರ್ವತಮ್ನೋರೇ
ನಮ್ ಮನೆ ವಿಷ್ಯ ವಸಿ ಹೇಳ್ತೀನ್ ಕೇಳ್ಸ್ಕೊಳ್ರಿ
ನೀವಂದ್ಕೊಂಡಂಗೆ ನಮ್ ಮನೆ ಮ್ಯಾಟ್ರ್ ಎಲ್ಲಾ ನೆಟ್ಗಿಲ್ರೀ
ಮುನಿಸ್ಕೊಂಡೆ ಮಲಗವ್ಳೆ ನನ್ ಹೆಂಡ್ತಿ
ಯಾಕಂತ ಒಂಚೂರ್ ಕೇಳ್ಬನ್ರಿ
ಸೀತಾ ರಾಮರ ಹಾಗೆ ಇತ್ತು ನಿಮ್ಮ ಫ್ಯಾಮಿಲಿ
ಅದು ಬೀದೀಗ್ಯಾಕೆ ಬಂತು ಇಷ್ಟು ಹೊತ್ತಲ್ಲಿ
ಕದ್ದು ಮುಚ್ಚಿ ನಡೆಯೋ ಗಲಾಟೇಲಿ ಮಜಾ ಇಲ್ರೀ
ಸಂಸಾರ ಬೀದಿಗ್ ಬಂದ್ರೆ ಬಿಟ್ಟಿ ಸಿನಿಮಾರೀ
ನಿಮ್ ಮನೆ ವಿಷ್ಯ ನಮ್ ಕಣ್ಣಿಗ್ ಬಿತ್ತಲ್ರೀ
ಮನೆ ಮುರಿಯೋ ಕೆಲಸ ಇವ್ರಿಗೆ ಬಿಡ್ರೀ
ಕಿಂಡಿಯಿಂದ ನಮ್ ಕಡೆ ನೋಡೋದ್ ಕಡಿಮೆ ಮಾಡ್ರೀ
ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ
ಮಧ್ಯೆ ಕಡ್ಡಿ ಆಡ್ಸೋ ಕೆಲಸ ನಿಮ್ಗೆ ಬೇಕಾ
ನೀವು ಅಂದ್ಕೊಂಡಂಗಿಲ್ಲಿ ಯಾವ ಸೀನೂ ನಡೆಯಲ್ರೀ
ಹೊತ್ತಾತು ಮನೆಗೆ ಹೋಗ್ರೀ
ಮಡದಿ ಜೊತೆ ಬೆಚ್ಚಗ್ ಮಲ್ಕೊಳ್ರೀ
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


