ವೇದಿಕಾ-ಶಿವಣ್ಣ ಕೂಡಲ ಸಂಗಮ

ನಟಿ ವೇದಿಕಾ ಮತ್ತೆ ಕನ್ನಡಕ್ಕೆ ಬರುವ ಅವಕಾಶ ಸಿಕ್ಕಿದೆ. ಹಾಗೆ ನೋಡಿದರೆ ನಟ ದರ್ಶನ್ ಅಭಿನಯದ...
ವೇದಿಕಾ
ವೇದಿಕಾ
Updated on: 

ನಟಿ ವೇದಿಕಾ ಮತ್ತೆ ಕನ್ನಡಕ್ಕೆ ಬರುವ ಅವಕಾಶ ಸಿಕ್ಕಿದೆ. ಹಾಗೆ ನೋಡಿದರೆ ನಟ ದರ್ಶನ್ ಅಭಿನಯದ ಬೃಂದಾವನ ಚಿತ್ರಕ್ಕೆ ನಾಯಕಿಯಾಗಿ ಬರಬೇಕಿತ್ತು. ಕೊನೇ ಕ್ಷಣದಲ್ಲಿ ವೇದಿಕಾ ಈ ಚಿತ್ರದಿಂದ ಗೇಟ್ ಪಾಸ್ ತೆಗೆದುಕೊಂಡರು.

ಈ ಚಿತ್ರಕ್ಕೂ ಮೊದಲು ನಟ ಗಣೇಶ್ ಅಭಿನಯದ ಸಂಗಮ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಆ ನಂತರ ಕನ್ನಡಕ್ಕೆ ಬಾರದ ಈಕೆಯನ್ನು 'ಶಿವಲಿಂಗ' ಸಿನಿಮಾ ಕರೆದುಕೊಂಡು ಬರುತ್ತಿದೆ. ನಟ ಶಿವರಾಜ್‌ಕುಮಾರ್ ಅಭಿನಯದ ಶಿವಲಿಂಗ ಸಿನಿಮಾಗೆ ವೇದಿಕಾ ನಾಯಕಿ ಪಾತ್ರಕ್ಕೆ ಅಂತಿಮಗೊಂಡಿದ್ದಾರೆ.

ಪಿ. ವಾಸು ನಿದೇಶನ ಮಾಡುತ್ತಿರುವ ಈ ಚಿತ್ರದ ನಿರ್ಮಾಪಕರು ಕೆ.ಎ ಸುರೇಶ್. ಇಂದು ಅದ್ದೂರಿಯಾಗಿ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ಮಾಡಿಕೊಳ್ಳುತ್ತಿರುವ ಈ ಚಿತ್ರದ ಸಂಭ್ರಮಕ್ಕೆ ಚಿತ್ರರಂಗದ ಬಹುತೇಕ ನಟ ನಟಿಯರು ಆಗಮಿಸಲದ್ದಾರೆ.

ಕೇಜ್ರಿಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡುತ್ತಿದ್ದಾರೆ. ಇನ್ನು ಡಾ. ರಾಜ್‌ಕುಮಾರ್ ಕುಟುಂಬದ ಸದಸ್ಯರು ಸೇರಿದಂತೆ ಶಿವಣ್ಣ ಅಭಿಮಾನಿಗಳಿಗೂ ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಇದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಮುಹೂರ್ತ ನಡೆಯಲಿದೆ. ಈಗಾಗಲೇ ತೆಲುಗು, ತಮಿಳು ಹಾಗೂ ಮಲೆಯಾಳಂ ಚಿತ್ರಗಳ ಅಭಿನಯಿಸಿ ಹೆಸರು ಮಾಡಿರು ವೇದಿಕಾ, ಒಳ್ಳೆಯ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಬಾಣಂ ಹಾಗೂ ಕಾಲೈ ಸಿನಿಮಾಗಳ ಮೂಲಕ ತನ್ನ ನಟನೆಯ ಪ್ರತಿಭೆ ತೋರಿಸಿದ ನಟಿ ಈಕೆ. ಈಗ ನಟ ಶಿವರಾಜ್‌ಕುಮಾರ್ ಜತೆ ಹೆಜ್ಜೆ ಹಾಕುತ್ತಿರುವುದರಿಂದ ನಿರೀಕ್ಷೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com