

ಅನಿಸುತ್ತಿದೆ ಯಾಕೋ ಇಂದು... ಹಾಡಿನ ಮೂಲಕ ಕನ್ನಡಿಗರ ಮನ ಸೆಳೆದ ಬಹು ಭಾಷಾ ಹಿನ್ನೆಲೆ ಗಾಯಕ ಸೋನು ನಿಗಂ ಜನವರಿ 24ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಸಂಗೀತ ಪ್ರಿಯರ ಮನತಣಿಸಲು ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಂ ತಮ್ಮ ಧ್ವನಿ ಮೂಲಕ ಬೆಂಗಳೂರಿಗರನ್ನು ಮೋಡಿ ಮಾಡಲಿದ್ದಾರೆ. ಜನವರಿ 23ರಂದು ಸೋನು ನಿಗಮ್ ಅವರ ರಸ ಸಂಜೆ ಸವಿಯಲು ಸೂಪರ್ ನೋವಾ ಸಜ್ಜಾಗುತ್ತಿದೆ. 'ಕ್ಲೋಸ್ ಟು ಮೈ ಹಾರ್ಟ್' ಎಂಬ ಶೀರ್ಷಿಕೆಯಡಿ ಕೆಬಿಜಿ ಸಂಸ್ಥೆಯು ಮೆಘಾ ಮ್ಯೂಸಿಕಲ್ ಕಾರ್ಯಕ್ರಮವನ್ನು ಆಯೋಜಿಸಿದೆ.
ದಕ್ಷಿಣ ಭಾರತದಲ್ಲಿ ಇದೇ ಪ್ರಥಮ ಬಾರಿಗೆ ನಡೆಯಲಿರುವ 'ಕ್ಲೋಸ್ ಟು ಮೈ ಹಾರ್ಟ್' ಕಾರ್ಯಕ್ರಮದಲ್ಲಿ ಕನ್ನಡ ಜನಪ್ರಿಯ ಚಿತ್ರಗೀತೆಗಳೊಂದಿಗೆ ಹಿಂದಿ ಗೀತೆಗಳ ಸೋನೆ ಮಳೆ ಸುರಿಸಲಿದ್ದಾರೆ ಸೋನು ನಿಗಂ.
1 ಲಕ್ಷ ಬಹುಮಾನ ಪಡೆಯುವ ಸುವರ್ಣವಕಾಶ
'ಕ್ಲೋಸ್ ಟು ಮೈ ಹಾರ್ಟ್' ಕಾರ್ಯಕ್ರಮದದಲ್ಲಿ ಬೆಂಗಳೂರು ಯುವತಿಯರಿಗೆ ಸೋನು ನಿಗಂ ಅವರಿಂದ 1 ಲಕ್ಷ ಪಡೆಯುವ ಸುವರ್ಣವಕಾಶ.
'ಕ್ಲೋಸ್ ಟು ಮೈ ಹಾರ್ಟ್' ಮೆಗಾ ಮ್ಯೂಸಿಕಲ್ ಕಾರ್ಯಕ್ರಮ ಬೆಂಗಳೂರಿನ ಯುವ ಗಾಯಕಿಯರಿಗೆ ವೇದಿಕೆ ಒದಗಿಸಿದೆ. ಹಾಡಲು ಇಚ್ಚಿಸುವ ಗಾಯಕಿಯರು ಡಿಸೆಂಬರ್ 24 ರಿಂದ ನಗರದ ಪ್ರಮುಖ ಕಾಲೇಜುಗಳು, ಐಟಿ ಸಂಸ್ಥೆಗಳಲ್ಲಿ ಆಡಿಷನ್ ಕೈಗೊಳ್ಳಲಾಗಿದೆ.
ಹಾಡಲು ಇಚ್ಚಿಸುವವರು ಡಿಸೆಂಬರ್ 24ರಿಂದ 'ಖೇಲ್ ಕರೋಕೆ' ಆಡಿಶನ್ನಲ್ಲಿ ಭಾಗವಹಿಸಿ ಸೋನು ನಿಗಂ ಅವರಿಂದ ಪ್ರಶಸ್ತಿ ಪಡೆಯುವ ಸುವರ್ಣ ಅವಕಾಶ ತಮ್ಮದಾಗಿಸಿಕೊಳ್ಳಬಹುದು.
'ಖೇಲ್ ಕರೋಕೆ' ಕಾರ್ಯಕ್ರಮವು ನಗರದ ಪ್ರಮುಖ ಕಾಲೇಜುಗಳು, ಐಟಿ ಸಂಸ್ಥೆಗಳಲ್ಲಿ ಆಯೋಜಿಸಲಾಗಿದೆ. ಇದರಲ್ಲಿ 3 ಯುವ ಗಾಯಕಿಯರನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಥಮ ಬಹುಮಾನ 1 ಲಕ್ಷ, ಮೊದಲ ಮತ್ತು ದ್ವಿತೀಯ ರನ್ನರ್ ಅಪ್ಗೆ ರು.25 ಸಾವಿರ ಬಹುಮಾನ ನೀಡಲಾಗುವುದು. ವಿಜೇತ ಗಾಯಕಿಯರಿಗೆ ಸ್ವತಃ ಸೋನು ನಿಗಂ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.