ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (ಸಂಗ್ರಹ ಚಿತ್ರ)
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (ಸಂಗ್ರಹ ಚಿತ್ರ)

ಬೆಡ್ ರೂಂಗೆ ಹೋಗಿ ನೋಡಲು ಸಾಧ್ಯವಿಲ್ಲ: ಪ್ರಿಯಾಂಕಾ ಚೋಪ್ರಾ

ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾರವಾಗಿ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ..
Published on

ಮುಂಬೈ: ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾರವಾಗಿ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ, 'ಬಾಡಿಗೆದಾರರ ಬೆಡ್ ರೂಮಿಗೆ ಹೋಗಿ ನಾನು ನೋಡಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ಚೋಪ್ರಾ ಅವರನ್ನು ಮಾಧ್ಯಮ ಪ್ರತಿನಿಧಿಗಳು ವೇಶ್ಯಾವಾಟಿಕೆ ಪ್ರಕರಣದ ಕುರಿತು ಪ್ರಶ್ನಿಸಿದರು. ಈ ವೇಳೆ ಕೋಪದಿಂದಲೇ ಉತ್ತರಿಸಿದ ನಟಿ ಪ್ರಿಯಾಂಕಾ, 'ಆರೋಪಿಗಳು ದೊರೆತಿರುವ ಫ್ಲಾಟ್ ನನ್ನದೇ ಇರಬಹುದು. ಹಾಗೆಂದ ಮಾತ್ರಕ್ಕೆ ಬಾಡಿಗೆದಾರರ ಬೆಡ್ ರೂಮಿಗೆ ನುಗ್ಗಿ ಏನಾಗುತ್ತಿದೆ ಎಂದು ನಾನು ನೋಡಲು ಸಾಧ್ಯವಿಲ್ಲವಲ್ಲ' ಎಂದು ಖಾರವಾಗಿ ಉತ್ತರಿಸಿದ್ದಾರೆ. ಅಲ್ಲದೆ ವೇಶ್ಯಾವಾಟಿಕೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಟಿ ಪ್ರಿಯಾಂಕಾ ಒಡೆತನವಿರುವ ಮುಂಬೈನ ಅಂಧೇರಿ ಪ್ರದೇಶದಲ್ಲಿರುವ ಫ್ಲಾಟ್‌ನಲ್ಲಿ ಕಳೆದ ವಾರ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪಿಂಪ್ ಸೇರಿ ಹಲವು ಯುವತಿಯರನ್ನು ಪೊಲೀಸರು ಬಂಧಿಸಿದ್ದರು. ಮಾಣಿಕ್ ಸೋನಿ ಎಂಬಾತ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾನೆ ಎಂಬ ಮಾಹಿತಿಯಾಧಾರದ ಮೇಲೆ ದಾಳಿ ನಡೆಸಿದ ಅಂಧೇರಿ ಪೊಲೀಸರು ಮ್ಯಾನೇಜರ್ ದಿನೇಶ್ ಚಂದ್ರಕಾಂತ್ ಸೇರಿದಂತೆ ಹಲವು ಯುವತಿಯರನ್ನು ಬಂಧಿಸಿದ್ದರು.

ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾಗತ್ತಿದ್ದಂತೆಯೇ ಇದು ನಟ ಪ್ರಿಯಾಂಕಾ ಚೋಪ್ರಾ ಅವರ ಮಾಲೀಕತ್ವದ ಫ್ಲಾಟ್ ಎಂದು ಖಚಿತವಾಗಿತ್ತು. ಪ್ರಕರಣದಿಂದ ತೀವ್ರ ಮುಜುಗರಕ್ಕೀಡಾಗಿರುವ ನಟಿ ಪ್ರಿಯಾಂಕಾ ಈ ಕುರಿತು ಸ್ಪಷ್ಟನೆ ನೀಡಿದ್ದರಾದರೂ, ಅವರ ಬೆನ್ನು ಬಿಡದ ಮಾಧ್ಯಮದ ಮಂದಿ ಸಿಕ್ಕಸಿಕ್ಕಾಗಲೆಲ್ಲಾ ಪ್ರಕರಣದ ಕುರಿತು ವಿಚಾರಿಸುತ್ತಿದ್ದಾರೆ. ಹೀಗಾಗಿ ಇದರಿಂದ ಕುಪಿತಗೊಂಡಿರುವ ಪ್ರಿಯಾಂಕ ಪರೋಕ್ಷವಾಗಿ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com