

ನವದೆಹಲಿ: ಜರ್ಮನ್ ರಾಯಭಾರಿ ಮೈಕೆಲ್ ಸ್ಟೈನರ್, ಅವರ ಪತ್ನಿ ಎಲಿಸಾ ಮತ್ತು ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ನಟಿಸಿರುವ ಬಾಲಿವುಡ್ಡಿನ ಪ್ರಮುಖ ಗೀತೆ 'ಕಲ್ ಹೋ ನಾ ಹೋ'ದ ರೀಮಿಕ್ಸ್ ಅಂತರ್ಜಾಲದಲ್ಲಿ ಸೂಪರ್ ಹಿಟ್ ಆಗಿ ವೈರಲ್ ಆಗಿದೆ. ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡ ಮೂರು ದಿನಗಳಲ್ಲೇ ೬ ಲಕ್ಷಕ್ಕೂ ಹೆಚ್ಚು ಜನರು ಇದನ್ನು ನೋಡಿದ್ದಾರೆ.
ಇದರ ಹಿಂದೆ ನಡೆದ ಕೆಲಸವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.
ಶಾರುಕ್ ಖಾನ್ ಜಾಗವನ್ನು ಸ್ಟೈನರ್ ತುಂಬಿದ್ದರೆ, ಪ್ರೀತಿ ಝಿಂತಾ ಪಾತ್ರದಲ್ಲಿ ಎಲಿಸಾ ಅಭಿನಯಿಸಿದ್ದು, ಸೈಫ್ ಅಲಿ ಖಾನ್ ಪಾತ್ರವನ್ನು ಸಲ್ಮಾನ್ ಖುರ್ಷಿದ್ ನಿರ್ವಹಿಸಿದ್ದಾರೆ.
ಈ ವಿಡಿಯೋ ಅತಿ ಹೆಚ್ಚೆಚ್ಚು ಜನಪ್ರಿಯತೆ ಪಡೆಯುತ್ತಿರುವುದರಿಂದ ಈ ವಿಡಿಯೋ ಮಾಡಿದ ಬಗೆಯನ್ನು ಕೂಡ ಬಿಡುಗಡೆ ಮಾಡಲಾಗುವುದು ಎಂದು ಜರ್ಮನ್ ರಾಯಭಾರ ಕಚೇರಿ ತಿಳಿಸಿದೆ.
ಏಪ್ರಿಲ್ ೨೪ ರಂದು ಸ್ಟೈನರ್, ಖುರ್ಷಿದ್, ಸೈಫ್ ಅಲಿ ಖಾನ್, ಶರ್ಮಿಳಾ ಟ್ಯಾಗೋರ್ ಮತ್ತು ಈ ಗೀತೆಯ ರಚನಕಾರ ಜಾವೇದ್ ಅಕ್ತರ್ ಸಮ್ಮುಖದಲ್ಲಿ ಈ ರೀಮಿಕ್ಸ್ ವಿಡಿಯೋವನ್ನು ಜರ್ಮನ್ ರಾಯಭಾರ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಲಾಗಿತ್ತು.
ವಿಡಿಯೋ ನೋಡಿ ಆನಂದಿಸಿ...