ಡುಮ್ಮಿ ಅನುಷ್ಕಾ ಶೆಟ್ಟಿ !

ಸಿನಿಮಾ ನಟಿಯರು ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿರುತ್ತಾರೆ. ನಾಯಕಿ ನಟಿ ಎಂದರೆ ಅವಳು ವಯ್ಯಾರದಿಂದ ಬಳುಕುತ್ತಿರಬೇಕು...
ಸೈಜ್ ಜೀರೋ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ, ಆರ್ಯ
ಸೈಜ್ ಜೀರೋ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ, ಆರ್ಯ

ಸಿನಿಮಾ ನಟಿಯರು ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿರುತ್ತಾರೆ. ನಾಯಕಿ ನಟಿ ಎಂದರೆ ಅವಳು ವಯ್ಯಾರದಿಂದ ಬಳುಕುತ್ತಿರಬೇಕು ಎಂಬ ನಿಲುವು ಎಲ್ಲ ಸಿನಿಮಾಗಳಲ್ಲಿ ಕಂಡುಬರುತ್ತದೆ.. ಆದರೆ ದಕ್ಷಿಣ ಭಾರತದ ಚೆಲುವೆ ಅನುಷ್ಕಾ ಶೆಟ್ಟಿ ಮಾತ್ರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಹಾಗಾಗಿಯೇ ಡುಮ್ಮಿಯಾಗಿದ್ದಾಳೆ. ಯೆಸ್...ಸುಂದರ ದೇಹ ಸಿರಿ ಹೊಂದಿದ್ದ ಅನುಷ್ಕಾಳ ದೇಹಭಾರ ಈಗ 20 ಕೆ.ಜಿ ಹೆಚ್ಚಾಗಿದೆ.

ಹೊಸ ಚಿತ್ರ ಸೈಜ್ ಜೀರೋದಲ್ಲಿ ಪಾತ್ರ ನಿರ್ವಹಿಸುವುದಕ್ಕಾಗಿಯೇ ಅನುಷ್ಕಾ ತನ್ನ ದೇಹದ ಭಾರ ಹೆಚ್ಚಿಸಿಕೊಂಡಿದ್ದಾಳೆ.

ಹೆಂಗಸರ ದೇಹದ ಭಾರ ಹೆಚ್ಚಾದರೆ ಅವರಿಗಾಗುವ ಸಮಸ್ಯೆಗಳ ಕಥೆಯನ್ನು ಹೊಂದಿರುವ ಸಿನಿಮಾ ಸೈಜ್ ಜೀರೋ. ಈ ಚಿತ್ರದಲ್ಲಿ ಅನುಷ್ಕಾ ಎರಡು ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ತಮಿಳು ಮತ್ತು ತೆಲುಗು ಈ  ಎರಡೂ ಭಾಷೆಗಳಲ್ಲಿ ಏಕ ಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಪ್ರಕಾಶ್ ಕೊವೆಲಮುಡಿ ನಿರ್ದೇಶಿಸುತ್ತಿದ್ದಾರೆ.

ಆರ್ಯ ಮತ್ತು ಅನುಷ್ಕಾ ಶೆಟ್ಟಿ ನಾಯಕ ನಾಯಕಿಯರಾಗಿ ಅಭಿನಯಿಸುತ್ತಿರುವ ಈ ಚಿತ್ರ ಅಕ್ಟೋಬರ್ ನಲ್ಲಿ ತೆರೆ ಕಾಣಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com