ಲಿಮ್ಕಾ ದಾಖಲೆಯತ್ತ 'ಆರಂಭ' ಚಿತ್ರದ, ವಿಶ್ವದ ಮೊದಲ ಉಲ್ಟಾ ಹಾಡು

ಲಿಮ್ಕಾ ದಾಖಲೆಯತ್ತ 'ಆರಂಭ' ಚಿತ್ರದ, ವಿಶ್ವದ ಮೊದಲ ಉಲ್ಟಾ ಹಾಡು

ಎಸ್ ಅಭಿ ಹನಕೆರೆ ನಿರ್ದೇಶನದ ಆರಂಭ ಚಿತ್ರದ `ಶಾಲೆಗೆ ಹೋಗೋದಿಲ್ಲ' ವೀಡಿಯೋ ಹಾಡು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ನಾಮಿನೇಟ್ ಆಗಿದೆ. ಹೌದು, ಇದು ಪ್ರಪಂಚದ ಮೊದಲ ಉಲ್ಟಾ ಹಾಡು ಎನ್ನುವ ಹೆಮ್ಮೆಗೆ ಪಾತ್ರವಾಗಲಿದೆ. ಸದ್ಯ ಹಾಡು ಲಿಮ್ಕಾ ತಂಡದವರಿಂದ ಪರಿಶೀಲನೆಯಲ್ಲಿದ್ದು ಶೀಘ್ರದಲ್ಲೇ ದಾಖಲೆ ಪುಟಕ್ಕೆ ಸೇರಲಿದೆ.

ಈ ಹಾಡನ್ನು ತಿರುಗು-ಮುರುಗು ಚಿತ್ರೀಕರಿಸಿ, ಸಂಕಲನ ಮಾಡಿ ಯೂಟೂಬಿನಲ್ಲಿ ಪ್ರಕಟಿಸಲಾಗಿತ್ತು. ಜನರ ಮೆಚ್ಚುಗೆಗೆ ಪಾತ್ರವಾಗಿ ಮಾಧ್ಯಮ ಮಿತ್ರರಿಂದಲೂ ಗುರುತಿಸಲ್ಪಟ್ಟಿತ್ತು. ಚಿತ್ರದ ಇತರೆ ಹಾಡುಗಳು ಮತ್ತು ಟ್ರೇಲರ್ ಈಗಾಗಲೆ ಭಾರೀ ಸದ್ದು ಮಾಡುತ್ತಿವೆ.

ಗುರುಕಿರಣ್ ಸಂಗೀತದ, ಕವಿರಾಜ್ ಬರೆದ ಹಾಡಿಗೆ, ರಿತೀಷ ಪದ್ಮನಾಭ ದನಿಯಾಗಿದ್ದಾರೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ನಿನ ಎಲ್ಲಾ ಹಂತಗಳನ್ನು ಪೂರೈಸಿದ್ದು, ಸೆನ್ಸಾರಿಗೆ ಸಿದ್ಧವಾಗಿದೆ.

ಶರ ಪ್ರೊಡಕ್ಶನ್ ಬ್ಯಾನರ್ ನಡಿಯಲ್ಲಿ ಡಿ ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸಿರುವ ಆರಂಭ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮಿಥುನ್ ಪ್ರಕಾಶ್,ಅಭಿರಾಮಿ,ಅಭಿರಾಜ್,ರಸಗವಳ ನಾರಾಯಣ,ಸತೀಶ್,ಜೀತು ಚಂದ್ರ,ಬಳ್ಳಾರಿ ರಾಘವೇಂದ್ರ,ನಾಟ್ಯರಂಗ  ಇನ್ನೂ ಮುಂತಾದವರಿದ್ದಾರೆ.

ವಿಡಿಯೊಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com