

ಹೈದ್ರಾಬಾದ್: ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಇಂದು ತೆರೆಕಂಡಿದ್ದು, ಸಾಮಾಜಿಕ ತಾಣದಲ್ಲಿ ಬಾಹುಬಲಿ ಸಂಚಲನ ಸೃಷ್ಟಿಸಿದೆ.
ಪ್ರಮುಖ ಸಾಮಾಜಿಕ ತಾಣಗಳಾದ ಫೇಸ್‌ಬುಕ್, ಟ್ವಿಟರ್‌ಗಳಲ್ಲಿಂದು ಬಾಹುಬಲಿ ಚಿತ್ರದ ಬಗ್ಗೆಯೇ ನೆಟಿಜನ್‌ಗಳು ಅಪ್‌ಡೇಟ್ ಕೊಡುತ್ತಿದ್ದಾರೆ.
ಬಹುಭಾಷೆಯಲ್ಲಿ ತೆರೆ ಕಂಡಿರುವ ಈ ಚಿತ್ರದ ಫೇಸ್‌ಬುಕ್ ಪೇಜ್‌ಗೆ ಸಿನಿಮಾ ಬಿಡುಗಡೆಯಾಗುವ ಮುನ್ನ ಅಂದರೆ ನಿನ್ನೆ ಸಂಜೆಯವರೆಗೆ 1.2 ಮಿಲಿಯನ್ ಲೈಕ್‌ಗಳು ಸಿಕ್ಕಿವೆ. ಮಾತ್ರವಲ್ಲದೆ ಬಾಹುಬಲಿ ಟ್ವೀಟರ್ ಖಾತೆ 1 ಲಕ್ಷ ಫಾಲೋವರ್‌ಗಳನ್ನು ಹೊಂದಿದೆ.
ಯೂಟ್ಯೂಬ್‌ನಲ್ಲಿ ಬಾಹುಬಲಿ ಟ್ರೇಲರ್‌ನ್ನು 4.05 ಲಕ್ಷ ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಸಾಮಾಜಿಕ ತಾಣದಲ್ಲಿ ಬಾಹುಬಲಿ ಹ್ಯಾಶ್ ಟ್ಯಾಗ್ (#bahubali) ಟ್ರೆಂಡಿಂಗ್ ಆಗಿದ್ದು, ಫಸ್ಟ್‌ಡೇ ಫಸ್ಟ್ ಶೋ ನೋಡಿದ ಜನರು ಈಗಾಗಲೇ ತಮ್ಮ ಒನ್ ಲೈನ್ ಅಭಿಪ್ರಾಯಗಳನ್ನು ಸೋಷ್ಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಮಾಡುತ್ತಿದ್ದಾರೆ.
ನೆಟಿಜನ್‌ಗಳು ಅಪ್‌ಡೇಟ್ ಮಾಡಿದ ಸ್ಟೇಟಸ್‌ಗಳಲ್ಲಿ ಹೆಚ್ಚಿನವು ಸಿನಿಮಾ ಬಗ್ಗೆ ಪಾಸಿಟಿವ್ ಅಭಿಪ್ರಾಯವುಳ್ಳದ್ದಾಗಿದೆ. ಸಿನಿಮಾದಲ್ಲಿನ ಯುದ್ಧರಂಗಗಳು, ಗ್ರಾಫಿಕ್ಸ್ , ಕಾಸ್ಟ್ಯೂಮ್ಸ್ ಮತ್ತು ಪ್ರಭಾಸ್, ರಾಣಾ ದುಗ್ಗುಬಾಟಿ, ತಮನ್ನಾ ಭಾಟಿಯಾ, ರಮ್ಯಾಕೃಷ್ಣ ನಟನೆ ಬಗ್ಗೆ ಹೆಚ್ಚಿನವರು ಮೆಚ್ಚಿಗೆ ಸೂಚಿಸಿದ್ದಾರೆ.