2ನೇ ದಿನವೇ 100 ಕೋಟಿ ಕ್ಲಬ್ ಸೇರಿದ ಬಾಹುಬಲಿBahubali Breaks PK’s Day 1 Record In USA: Sources
2ನೇ ದಿನವೇ 100 ಕೋಟಿ ಕ್ಲಬ್ ಸೇರಿದ ಬಾಹುಬಲಿBahubali Breaks PK’s Day 1 Record In USA: Sources

2ನೇ ದಿನವೇ 100 ಕೋಟಿ ಕ್ಲಬ್ ಸೇರಿದ ಬಾಹುಬಲಿ

ಬಾಹುಬಲಿಯ ಅಬ್ಬರಕ್ಕೆ ಬಾಕ್ಸಾಫೀಸಿನ ಎಲ್ಲ ದಾಖಲೆಗಳು ಧೂಳಿಪಟ. ವಿದೇಶದಲ್ಲಿ ಬಾಹುಬಲಿಯ ತೆಲುಗು ಆವತರಣಿಕೆ ಅಭೂತಪೂರ್ವ ಓಪನಿಂಗ್ ಪಡೆದಿದ್ದು...
Published on

ಹೈದರಾಬಾದ್: ಬಾಹುಬಲಿಯ ಅಬ್ಬರಕ್ಕೆ ಬಾಕ್ಸಾಫೀಸಿನ ಎಲ್ಲ ದಾಖಲೆಗಳು ಧೂಳಿಪಟ.

ವಿದೇಶದಲ್ಲಿ ಬಾಹುಬಲಿಯ ತೆಲುಗು ಆವತರಣಿಕೆ ಅಭೂತಪೂರ್ವ ಓಪನಿಂಗ್ ಪಡೆದಿದ್ದು, ಅಮೆರಿಕದಲ್ಲಿ ಈವರೆಗೂ ಅಮಿರ್ ಖಾನ್ ರ ಪೀಕೆ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದೆ. ಮೊದಲದಿನ ರು.6ಕೋಟಿ ಗಳಿಸಿದ್ದ ಪೀಕೆಯನ್ನು ಮೀರಿಸಿರುವ ಬಾಹುಹಲಿ ಒಂದೇ ದಿನ ರು.8.15ಕೋಟಿ ಬಾಚಿಕೊಂಡಿದೆ.

ಇದು ವಿದೇಶದ ದಾಖಲೆಯಾಗಿದ್ದು, ಭಾರತದಲ್ಲೂ ಸಹ ಎಲ್ಲ ರೆಕಾರ್ಡ್ ಪುಡಿಗಟ್ಟಿದೆ. ಮೊದಲ ದಿನ ರು.44.37ಕೋಟಿ ಗಳಿಸಿದ್ದ ಬಾಲಿವುಡ್ ನ ಹ್ಯಾಪಿ ನ್ಯೂಇಯರ್ ಚಿತ್ರ ಇದೀಗ ಬಾಹುಬಲಿಯಿಂದ 2 ನೇ ಸ್ಥಾನಕ್ಕೆ ಇಳಿದಿದೆ. ಬಾಹುಬಲಿಯ ಮೊದಲ ದಿನದ ಕಲೆಕ್ಷನ್ ರು.50 ಕೋಟಿಯಾಗಿದ್ದು, ವಿಶ್ವದಾದ್ಯಂತ ಗಳಿಕೆ ರು.66 ಕೋಟಿ. ಎರಡನೇ ದಿನದಂತ್ಯಕ್ಕೆ ವಿಶ್ವದ್ಯಂತ ಒಟ್ಟು ಗಳಿಕೆ ರು.140 ಕೋಟಿ ದಾಟಿದೆ ಎಂದು ವರದಿಗಳು ಹೇಳುತ್ತಿವೆ. ಇದರಿಂದಾಗಿ ಬಾಹುಬಲಿ ಅತಿ ವೇಗದಲ್ಲಿಯೇ 100 ಕೋಟಿ ಕ್ಲಬ್ ಸೇರಿದ ಭಾರತೀಯ ಚಿತ್ರ ಎಂಬ ದಾಖಲೆ ನಿರ್ಮಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com