ಬಾಹುಬಲಿಗೆ ಯು/ಎ ಪ್ರಮಾಣಪತ್ರ, ಜುಲೈ 10ಕ್ಕೆ ಚಿತ್ರ ಬಿಡುಗಡೆ

ಟಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಬಾಹುಬಲಿಗೆ ಮಂಗಳವಾರ ಯು/ಎ ಪ್ರಮಾಣ ಪತ್ರ ದೊರೆತಿದ್ದು, ಚಿತ್ರ ಮುಂಬರುವ ಜುಲೈ 10ರಂದು ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಬಾಹುಬಲಿ ಚಿತ್ರದ ಪೋಸ್ಟರ್
ಬಾಹುಬಲಿ ಚಿತ್ರದ ಪೋಸ್ಟರ್
Updated on: 

ಹೈದರಾಬಾದ್: ಟಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಬಾಹುಬಲಿಗೆ ಮಂಗಳವಾರ ಯು/ಎ ಪ್ರಮಾಣ ಪತ್ರ ದೊರೆತಿದ್ದು, ಚಿತ್ರ ಮುಂಬರುವ ಜುಲೈ 10ರಂದು ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

ದಕ್ಷಿಣ ಭಾರತದ ಯಶಸ್ವಿ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹುಬಲಿ ತೆರೆ ಕಾಣಲು ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮೂಲಗಳ ಪ್ರಕಾರ ಕೇಂದ್ರೀಯ ಸೆನ್ಸಾರ್ ಮಂಡಳಿ ಚಿತ್ರವನ್ನು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಇನ್ನು ಚಿತ್ರ ಇದೇ ಜುಲೈ 10ರಂದು ದೇಶಾದ್ಯಂತ ತೆರೆಕಾಣುತ್ತಿದ್ದು, ಈಗಾಗಲೇ ಚಿತ್ರ ಬಿಡುಗಡೆಗೆ ಚಿತ್ರ ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಇನ್ನು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಬಾಲಿವುಡ್ ಗಣ್ಯರಲ್ಲಿಯೂ ಬಾಹುಬಲಿ ಚಿತ್ರದ ಬಗೆಗಿನ ಕುತೂಹಲ ಹೆಚ್ಚಾಗಿದ್ದು, ಬಿಗ್ ಬಿ ಅಮಿತಾಬ್ ಬಚ್ಚನ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಚಿತ್ರ ಅಚ್ಚರಿ ಮತ್ತು ಆಶ್ಚರ್ಯಕರವಾಗಿದ್ದು, ತಾವೂ ಕೂಡ ಚಿತ್ರ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವುದಾಗಿ ಬಿಗ್ ಬಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇಂತಹ ದೃಶ್ಯವೈಭವದ ಚಿತ್ರದಲ್ಲಿ ತಾವೂ ಪಾಲ್ಗೊಳ್ಳಬೇಕಿತ್ತು ಎಂದು ಬಿಗ್ ಬಿ ಹೇಳಿದ್ದಾರೆ. ಇನ್ನು ಮೂಲಗಳು ತಿಳಿಸಿರುವಂತೆ ಚಿತ್ರದ ಮೇಕಿಂಗ್ ಮತ್ತು ಚಿತ್ರದಕಥೆ ಕುರಿತಂತೆ ಸೆನ್ಸಾರ್ ಮಂಡಳಿ ಸದಸ್ಯರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ.

ಒಟ್ಟಾರೆ ಸತತ 2 ವರ್ಷಗಳಿಂದ ಚಿತ್ರೀಕರಣದಲ್ಲಿ ತೋಡಗಿ ಪ್ರೇಕ್ಷಕರ ಸಹನೆ ಪರೀಕ್ಷೆ ನಡೆಸಿದ ಬಾಹುಬಲಿ ಚಿತ್ರ ಅಂತಿಮವಾಗಿ ಇದೇ ಜುಲೈ 10ರಂದು ತೆರೆಕಾಣುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com