ಜುಲೈ 10 ರಂದು 'ಬಾಹುಬಲಿ' ತೆರೆಗೆ

'ಈಗ' ಸಿನಿಮಾ ನಂತರ ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಜುಲೈ 10 ರಂದು ತೆರೆ ಕಾಣಲಿದೆ. ಪ್ರಭಾಸ್ ನಾಯಕನಾಗಿರುವ...
ಕರಣ್ ಜೋಹರ್ & ಬಾಹುಬಲಿ ಫಸ್ಟ್ ಲುಕ್ ಪೋಸ್ಟರ್
ಕರಣ್ ಜೋಹರ್ & ಬಾಹುಬಲಿ ಫಸ್ಟ್ ಲುಕ್ ಪೋಸ್ಟರ್
Updated on: 

'ಈಗ' ಸಿನಿಮಾ ನಂತರ ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರ ಜುಲೈ 10 ರಂದು ತೆರೆ ಕಾಣಲಿದೆ. ಪ್ರಭಾಸ್ ನಾಯಕನಾಗಿರುವ ಈ ಚಿತ್ರದಲ್ಲಿ ಅನುಷ್ಕಾ, ತಮನ್ನಾ, ರಾಣಾ, ಸತ್ಯರಾಜ್, ನಾಸರ್, ರಮ್ಯಾ ಕೃಷ್ಣ, ಅದ್ವಿತಿ ಶೇಶ್ ಮೊದಲಾದವರು ತಾರಾಗಣದಲ್ಲಿದ್ದಾರೆ.

ಸಂಗೀತ ನಿರ್ದೇಶನ ಎಂಎಂ ಕೀರವಾಣಿಯವರದ್ದು. ಇದೇ ಚಿತ್ರ ತಮಿಳಿನಲ್ಲಿ ಮಹಾಬಲಿ ಎಂಬ ಹೆಸರಿನಲ್ಲಿ ರಿಲೀಸ್ ಆಗಲಿದೆ. 2013ರಲ್ಲಿ ಸಿನಿಮಾದ ಚಿತ್ರೀಕರಣ ಆರಂಭಗೊಂಡಿತ್ತು. ಈ ಚಿತ್ರಕ್ಕಾಗಿ 17 ಸ್ಟುಡಿಯೋಗಳಲ್ಲಿ 600 ಕಲಾವಿದರು ಅಹೋರಾತ್ರಿ ದುಡಿದಿದ್ದರು.

ಇಷ್ಟೊಂದು ಕಾಲ ಚಿತ್ರೀಕರಣ ನಡೆಸಿ ಅದ್ದೂರಿಯಾಗಿ ಬಿಡುಗಡೆಯಾಗಲಿರುವ ಈ ಚಿತ್ರ ಪ್ರೇಕ್ಷಕರಲ್ಲಿ ಬಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಬಾಹುಬಲಿ ಚಿತ್ರವನ್ನು ಹಿಂದಿ ಭಾಷೆಯಲ್ಲಿ ತರಲಿದ್ದು, ಚಿತ್ರದ ಫಸ್ಟ್‌ಲುಕ್‌ನ್ನು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com