ಮೊಟ್ಟ ಮೊದಲ ಫೇಸ್ ಬುಕ್ ಧಾರವಾಹಿ ಜೂನ್ ನಲ್ಲಿ ತೆರೆಗೆ

ಒಂದಲ್ಲಾ ಒಂದು ರೀತಿಯ ವಿನೂತನ ಪ್ರಯೋಗಕ್ಕೆ ವೇದಿಕೆಯಾಗಿರುವ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಈಗ ಮತ್ತೊಂದು ವಿನೂತನ ಪ್ರಯೋಗ ನಡೆಯಲಿದೆ.
ಧಾರವಾಹಿ ನಿರ್ದೇಶಕ ಅವಿರಾಮ್ ಕಂಠೀರವ
ಧಾರವಾಹಿ ನಿರ್ದೇಶಕ ಅವಿರಾಮ್ ಕಂಠೀರವ

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸುದ್ದಿ-ಲೇಖನಗಳು ಪ್ರಕಟವಾಗುವುದು ಹಳೆಯ ಸುದ್ದಿ. ಇಂಥದ್ದೇ ಒಂದು ವಿನೂತನ ಪ್ರಯೋಗ ಫೇಸ್ ಬುಕ್ ನಲ್ಲಿ ನಡೆಯಲಿದೆ.  

ಬೆಂಗಳೂರಿನ ಮೈಕ್ರೋ ಬಯಾಲಜಿ ವಿದ್ಯಾರ್ಥಿ, ಧಾರವಾಹಿ ನಿರ್ದೇಶಕ ಅವಿರಾಮ್ ಕಂಠೀರವ ಫೇಸ್ ಬುಕ್ ನಲ್ಲಿ ಧಾರವಾಹಿ ಪ್ರಸಾರ ಮಾಡುವ ಸಾಹಸಕ್ಕೆ ಮುಂದಾಗಿದ್ದಾರೆ. ಅಂದಹಾಗೆ ಹಲೋ ಎಂಬ ಶೀರ್ಷಿಕೆಯ ಈ ಧಾರವಾಹಿ ಫೇಸ್ ಬುಕ್ ನಲ್ಲಿ ಮಾತ್ರ ಪ್ರಸಾರವಾಗಲಿದೆ.

ವಿಡಿಯೋಗಳನ್ನು ಅಪ್ ಲೋಡ್ ಮಾಡಲು ನೀಡಲಾಗಿರುವ ಆಯ್ಕೆಯನ್ನು ಬಳಸಿಕೊಂಡೇ ತಮ್ಮ ಧಾರವಾಹಿಯನ್ನು ಜನರಿಗೆ ತಲುಪಿಸಲಿದ್ದಾರೆ ಅವಿರಾಮ್ ಕಂಠೀರವ.ಈ ಧಾರವಾಹಿ 10  ನಿಮಿಷಗಳ ಸಂಚಿಕೆಯನ್ನು ಹೊಂದಿರಲಿದೆ. ಪ್ರತಿ ಸಂಚಿಕೆಯ ಲಿಂಕ್ ನ್ನು  ಪ್ರತಿ ಶನಿವಾರ ಬೆಳಿಗ್ಗೆ 10 ಕ್ಕೆ ಅಪ್ ಲೋಡ್ ಮಾಡುವುದಾಗಿ ನಿರ್ದೇಶಕ  ಅವಿರಾಮ್ ಕಂಠೀರವ ತಿಳಿಸಿದ್ದಾರೆ. ಹಲೋ ಎಂಬ ಧಾರವಾಹಿಯನ್ನು ಸಿನಿ ಸೀರಿಯಲ್ ಕಾನ್ಸೆಪ್ಟ್ ಆಗಿದ್ದು, ಧಾರವಾಹಿಯ 5 ಹಾಡುಗಳ ಪೈಕಿ ಒಂದರಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಸಹ ಹಾಡಿದ್ದಾರೆ.

ಪ್ರೀತಿ ಮತ್ತು ಅಪರಾಧ ಸಿನಿಮಾ ರೀತಿಯಲ್ಲೇ ಚಿತ್ರೀಕರಿಸಲಾಗಿರುವ ಧಾರವಾಹಿಯ ವಿಷಯವಾಗಿದ್ದು, ಇಂಗ್ಲೀಷ್ ಸಬ ಟೈಟಲ್ ಗಳನ್ನೊಳಗೊಂಡ ಸಂಚಿಕೆಗಳನ್ನು ಪ್ರಸಾರ ಮಾಡಲಾಗುವುದು, ಎಲ್ಲವೂ ಯೋಜನೆಗಳ ಪ್ರಕಾರ ನಡೆದರೆ ಮೊದಲ ಸಂಚಿಕೆ ಜೂನ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಅವಿರಾಮ್ ಕಂಠೀರವ ಮಾಹಿತಿ ನೀಡಿದ್ದಾರೆ.

ಧಾರವಾಹಿಗಳನ್ನು ವೀಕ್ಷಿಸಲು ಯುವಜನತೆಗೆ ಸಮಯವಿರುವುದಿಲ್ಲ, ಅಲ್ಲದೇ ಇಂದಿನ ಯುವಕರು ಮನರಂಜನೆಗಾಗಿ ಮೊಬೈಲ್  ಮೇಲೆ ಅವಲಂಬಿತರಾಗಿರುವುದು ತಮ್ಮ ಧಾರವಾಹಿ ಯಶಸ್ಸಿಗೆ ನೆರವಾಗಲಿದೆ,  ವಿಶೇಷವೆಂದರೆ ಮೊಬೈಲ್, ದೂರವಾಣಿಗಳ ಹಾಗು ಸಾಮಾಜಿಕ ಸಂಪರ್ಕಜಾಲವನ್ನೇ ಮುಂದಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ ಎಂದು ಅವಿರಾಮ್  ಹೇಳಿದ್ದಾರೆ.

ಕರ್ನಾಟಕ ಹಾಗೂ ಹೊರ ರಾಜ್ಯಗಳ ಕಲಾವಿದರೂ ತಮ್ಮ ಧಾರವಾಹಿಯಲ್ಲಿ ಅಭಿನಯಿಸಿದ್ದು, ಹೊಸ ಪ್ರತಿಭೆಗಳಾಗಿರುವುದರಿಂದ ಸಂಭಾವನೆ ರಹಿತವಾಗಿಯೇ ನಟನೆ ಮಾಡಿದ್ದಾರೆ. ತಮ್ಮ ಧಾರವಾಹಿಯಲ್ಲಿ ಬ್ರಾಂಡ್ ಪ್ರಚಾರ ಮಾಡುವುದಾಗಿಯೂ ತಿಳಿಸಿರುವ ನಿರ್ದೇಶಕ ಅವಿರಾಂ ಕಂಠೀರವ, ಧಾರವಾಹಿ ಸಂಚಿಕೆಯ ಕೊನೆಯಲ್ಲಿ ಲೋಗೊಗಳನ್ನು ಪ್ರದರ್ಶಿಸಲಾಗುವುದು ಎಂದಿದ್ದಾರೆ.  

ಅವಿರಾಮ್ ಗೆ  ಕನ್ನಡದ ಅನೇಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅನುಭವವಿದೆ. ಮಕ್ಕಳ ವೈಶಿಷ್ಟ್ಯವನ್ನು ಹೊಂದಿದ್ದ ನೂರಾರು ಕನಸು ಎಂಬ ಚಿತ್ರವನ್ನೂ ಸಹ ಅವಿರಾಮ್ ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com