

ಬೆಂಗಳೂರು: ಕನ್ನಡದ ಡೇರ್ ಡೆವಿಲ್ ನಟಿ, ಚಿತ್ರರಂಗದಲ್ಲಿ ಹಲವು ಪಾತ್ರಗಳಲ್ಲಿ ನಟಿಸುತ್ತಾ ತಮ್ಮದೇ ಛಾಪು ಮೂಡಿಸಿರುವ ಮಾಲಾಶ್ರೀ ಈಗ ಅವರ ಹೊಸ ಸಿನೆಮಾ 'ಗಂಗಾ'ದಲ್ಲಿ ನೂತನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದರೆ. ಅವರು ಆಟೋ ಚಾಲಕರಾಗಿ ಕಾಣಿಕೊಳ್ಳುತ್ತಿರುವುದು ವಿಶೇಷ.
"ಈ ಬಾರಿ ನಾನು ಆಟೊ ಚಾಲಕಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಪಾತ್ರದಿಂದ ನಾನು ಎಲ್ಲ ಮಹಿಳೆಯರಿಗೆ ಸಂದೇಶ ನೀಡುವುದೇನೆಂದರೆ, ಜೀವನದಲ್ಲಿ ಯಾರ ಬೆಂಬಲವೂ ಇಲ್ಲದೆ ಸಂತೋಷದಿಂದ ಬಾಳಬಹುದು. ಈ ಸಿನೆಮಾ ಮಹಿಳೆಯರಿಗೆ ತಮ್ಮ ಸ್ವಂತ ಕಾಲಿನ ಮೇಲೆ ನಿಂತು ಬದುಕಲು ಸ್ಫೂರ್ತಿ ನೀಡುತ್ತದೆ" ಎನ್ನುತ್ತಾರೆ ಮಾಲಾಶ್ರೀ.
ಮಾಲಾಶ್ರೀ ಹೇಳುವಂತೆ ಏಳು ವರ್ಷದ ಹಿಂದೆ ಈ ಕಥೆ ಹೇಳಿದವರು ಅವರ ಪತಿ ರಾಮು. "ಅವರು ಒಂದು ವಿಷಯವನ್ನು ತೆಗೆದುಕೊಳ್ಳುತ್ತಾರೆ. ನಂತರ ಅದಕ್ಕೆ ಒಂದು ರೂಪ ಸಿಗುವವರೆಗೂ ನಾವು ಚರ್ಚಿಸುತ್ತೇವೆ. ಪ್ರೇಕ್ಷಕರು ಮನರಂಜನೆಗಾಗಿ ದುಡ್ಡು ನೀಡುತ್ತಾರೆ. ಆದುದರಿಂದ ನಾವು ಎಚ್ಚರಿಕೆಯಿಂದ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ" ಎನ್ನುತ್ತಾರೆ.
ಈ ವಾರ 'ಗಂಗಾ' ತೆರೆ ಕಾಣಲಿದೆ.