

ಬೆಂಗಳೂರು: ಅಪ್ಪನ ಪಾತ್ರಗಳಲ್ಲಿ ಬೆಳ್ಳಿ ತೆರೆಯ ಮೇಲೆ ಹೊಸಹುಟ್ಟು ಪಡೆದಿರುವ ನಟ ರವಿಚಂದ್ರನ್, ನಾಯಕ ನಟನ ಪಾತ್ರಗಳನ್ನು ಮುಂಚೂಣಿಯಲ್ಲಿ ಪಡೆಯುತ್ತಿರುವುದು ಗಮನಾರ್ಹ.
ಈಗ ಎಸ್ ನಾರಾಯಣ್ ಅವರು ರವಿಚಂದ್ರನ್ ಅವರನ್ನು ನಿರ್ದೇಶಿಸಲಿದ್ದಾರೆ. ವಿಶೇಷವೆಂದರೆ ೧೬ ವರ್ಷಗಳ ನಂತರ ಇವರಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿರುವುದು. "ವಿಜಯವಾಡ ಮೂಲದ ನಿರ್ಮಾಪಕ ಸುಬ್ರಮಣಿಯನ್ ಅವರೇ ಸಿನೆಮಾ ಕಥೆ ಸಿದ್ಧಪಡಿಸಿದ್ದಾರೆ. ಸೋಮವಾರ ಚಲನಚಿತ್ರಕ್ಕೆ ಮುಹೂರ್ತ ನಡೆದಿದ್ದು, ಸಿನೆಮಾಗೆ ಇನ್ನೂ ಹೆಸರಿಡಬೇಕಿದೆ. ನವೆಂಬರ್ ೩ ಅಥವಾ ೪ ಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.
"ರವಿಚಂದ್ರನ್ ಅವರಿಗೆ ಸಿನೆಮಾದಲ್ಲಿ ವಿಶಿಷ್ಟ ಪಾತ್ರವಿದೆ. ಇನ್ನೂ ಹೆಚ್ಚಿನ ನಟರ ಆಯ್ಕೆ ಪ್ರಾರಂಭವಾಗಿದೆ" ಎನ್ನುತ್ತಾರೆ ನಾರಾಯಣ್.