ಕೋಟಿಗೊಬ್ಬ2 ಚಿತ್ರದಲ್ಲಿ 6 ಖಳನಟರ ಜತೆ ಸುದೀಪ್ ಕಾಳಗ

ಕಿಚ್ಚ ಸುದೀಪ್ ಅವರಿಗೆ ತಮಿಳು ಚಿತ್ರ ನಿರ್ದೇಶಕ ಕೆ.ಎಸ್ ರವಿಕುಮಾರ್ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದು, ಆ ಚಿತ್ರಕ್ಕೆ ಕೋಟಿಗೊಬ್ಬ 2 ಎಂಬ ಹೆಸರು ಅಂತಿಮವಾಗಿದೆ...
ಸುದೀಪ್
ಸುದೀಪ್
ಕಿಚ್ಚ ಸುದೀಪ್ ಅವರಿಗೆ ತಮಿಳು ಚಿತ್ರ ನಿರ್ದೇಶಕ ಕೆ.ಎಸ್ ರವಿಕುಮಾರ್ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದು, ಆ ಚಿತ್ರಕ್ಕೆ ಕೋಟಿಗೊಬ್ಬ 2 ಎಂಬ ಹೆಸರು ಅಂತಿಮವಾಗಿದೆ. 
ಈ ಚಿತ್ರ ತ್ರಿಭಾಷಾಗಳಲ್ಲಿ ರೆಡಿಯಾಗುತ್ತಿದ್ದು, ಒಟ್ಟು 6 ಖ್ಯಾತ ಖಳನಟರೊಂದಿಗೆ ಸುದೀಪ್ ಸೆಣೆಸಲಿದ್ದಾರೆ ಎಂಬ ಸುದ್ದಿ ಹೊರಬಂದಿದೆ. ಕಿಚ್ಚನೊಂದಿಗೆ ಖ್ಯಾತ ಖಳನಟರಾದ ಬಹುಭಾಷಾ ತಾರೆ ಪ್ರಕಾಶ್ ರಾಜ್, ಅರ್ಮುಗಂ ರವಿಶಂಕರ್, ನಾಜರ್, ಶರತ್ ಲೋಹಿತಾಶ್ವ, ಅವಿನಾಶ್, ಮುಖೇಶ್ ತಿವಾರಿ ಕಾಣಿಸಿಕೊಳ್ಳಲಿದ್ದಾರೆ.
ಸೂರಪ್ಪ ಬಾಬು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಸುದೀಪ್'ಗೆ ನಾಯಕಿಯಾಗಿ ನಿತ್ಯಾ ಮೆನನ್ ಅಭಿನಯಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com