ದರ್ಶನ್ 'ಚಕ್ರವರ್ತಿ'ಗೆ ಬೆಡಗಿ ಅಂಜಲಿ

ದರ್ಶನ್ ನಟನೆಯ 'ಚಕ್ರವರ್ತಿ' ಸಿನೆಮಾಗೆ ನಾಯಕ ನಟಿಯ ಆಯ್ಕೆ ಅಂತಿಮಗೊಳಿಸಲಾಗಿದೆ. ಎರಡು ತಿಂಗಳ ಹುಡುಕಾಟದ ನಂತರ ಚಿತ್ರತಂಡ ದಕ್ಷಿಣ ಭಾರತದ ನಟಿ
ನಟಿ ಅಂಜಲಿ
ನಟಿ ಅಂಜಲಿ
Updated on

ಬೆಂಗಳೂರು: ದರ್ಶನ್ ನಟನೆಯ 'ಚಕ್ರವರ್ತಿ' ಸಿನೆಮಾಗೆ ನಾಯಕ ನಟಿಯ ಆಯ್ಕೆ ಅಂತಿಮಗೊಳಿಸಲಾಗಿದೆ. ಎರಡು ತಿಂಗಳ ಹುಡುಕಾಟದ ನಂತರ ಚಿತ್ರತಂಡ ದಕ್ಷಿಣ ಭಾರತದ ನಟಿ ಅಂಜಲಿಯನ್ನು ಆಯ್ಕೆ ಮಾಡಿದೆ.

"ಸಾಂಪ್ರದಾಯಿಕ ಮನೆ ಹುಡುಗಿ ಪಾತ್ರ ಮಾಡಬಲ್ಲ ನಟಿಯ ಅವಶ್ಯಕತೆ ಇತ್ತು. ಇದಕ್ಕೆ ಅಂಜಲಿ ಸೂಕ್ತವೆನಿಸಿತು" ಎನ್ನುತ್ತಾರೆ ಸಿನೆಮಾದ ನಿರ್ದೇಶಕ ಚಿಂತನ್.

ಇದು ಭೂಗತ ಲೋಕದ ಕಥೆಯಾದರೂ, ನಾಯಕ ಮತ್ತು ನಾಯಕಿಯ ನಡುವೆ ಕೌಟುಂಬಿಕ ಕೆಮಿಸ್ಟ್ರಿ ಇರುತ್ತದೆ ಎನ್ನುತ್ತಾರೆ ನಿರ್ದೇಶಕ. ಇನ್ನುಳಿದ ತಾರಾಗಣದ ಆಯ್ಕೆಯಲ್ಲೂ ಚಿತ್ರತಂಡ ನಿರತವಾಗಿದೆ. "'ಜಗ್ಗು ದಾದ' ಚಿತ್ರೀಕರಣದ ನಂತರ ನಮ್ಮ ಯೋಜನೆ ಪ್ರಾರಂಭಾವಾಗುತ್ತದೆ. ಸದ್ಯಕ್ಕೆ ನಿಗದಿಯಾಗಿರುವಂತೆ ನಾವು ಏಪ್ರಿಲ್ ಕೊನೆಯಲ್ಲಿ ಅಥವಾ ಮೇ ಮೊದಲ ವಾರ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ" ಎಂದು ಅವರು ವಿವರಿಸುತ್ತಾರೆ.

ಈ ಹಿಂದೆ ೨೦೦೮ರಲ್ಲಿ 'ಹೊಂಗನಸು' ನಂತರ 'ರಣ ವಿಕ್ರಮ'ದಲ್ಲಿ ನಂತಿಸಿದ್ದ ಅಂಜಲಿಗೆ ಇದು  ಮೂರನೆ ಕನ್ನಡ ಸಿನೆಮಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com