ಭಾರತದಲ್ಲಿ ನನಗಿಂತ ದೊಡ್ಡ ದೇಶಪ್ರೇಮಿ ಮತ್ತೊಬ್ಬರಿಲ್ಲ: ಶಾರುಖ್ ಖಾನ್

ಕಳೆದ ವರ್ಷದ 'ಅಸಹಿಷ್ಣುತೆ' ಹೇಳಿಕೆ ನೀಡಿ ತೀವ್ರ ಟೀಕೆಗೆ ಒಳಗಾಗಿದ್ದ ಬಾಲಿವುಡ್ ನಟ ಶಾರುಕ್ ಖಾನ್, ಇದೀಗ ಭಾರತದಲ್ಲಿ ತಮಗಿಂತ ದೊಡ್ಡ ದೇಶಪ್ರೇಮಿ ಮತ್ತೊಬ್ಬರಿಲ್ಲ ಎಂದು ಹೇಳಿದ್ದಾರೆ...
ನಟ ಶಾರುಖ್ ಖಾನ್
ನಟ ಶಾರುಖ್ ಖಾನ್
Updated on

ನವದೆಹಲಿ: ಕಳೆದ ವರ್ಷದ 'ಅಸಹಿಷ್ಣುತೆ' ಹೇಳಿಕೆ ನೀಡಿ ತೀವ್ರ ಟೀಕೆಗೆ ಒಳಗಾಗಿದ್ದ ಬಾಲಿವುಡ್ ನಟ ಶಾರುಕ್ ಖಾನ್, ಇದೀಗ ಭಾರತದಲ್ಲಿ ತಮಗಿಂತ ದೊಡ್ಡ ದೇಶಪ್ರೇಮಿ ಮತ್ತೊಬ್ಬರಿಲ್ಲ ಎಂದು ಹೇಳಿದ್ದಾರೆ.

ಇಂಡಿಯಾ ಟಿವಿಯ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕೆಲವು ಸಮಯದಲ್ಲಿ ನನಗೆ ತುಂಬಾ ಬೇಸರವಾಗುತ್ತದೆ. ಅಳಬೇಕೆನಿಸುತ್ತದೆ. ಈ ದೇಶದ ವ್ಯಕ್ತಿಯಾಗಿ ಹೇಳುತ್ತಿದ್ದೇನೆ. ನಾನೊಬ್ಬ ದೇಶಪ್ರೇಮಿ. ಯುವ ಜನತೆಗೆ ಹೇಳುವುದೇನೆಂದರೆ ಸಹಿಷ್ಣುತೆಯಿಂದಿರಿ. ಸಂತೋಷವಾಗಿರಿ. ದೇಶವನ್ನು ಮುಂದೆ ತರಲು ಶ್ರಮ ಪಟ್ಟು ದುಡಿಯಿರಿ ಎಂದು ಹೇಳಿದ್ದಾರೆ.

ವಿಶ್ವದ ದೊಡ್ಡ ದೇಶದಲ್ಲಿ ನಾವು ಬದುಕುತ್ತಿದ್ದೇವೆ. ನಾವು ಧನಾತ್ಮಕವಾಗಿ ಮುಂದೆ ಸಾಗಬೇಕು. ನಾವು ವಿಶ್ವದ ಸುರಕ್ಷಿತ ಹಾಗೂ ಸುಂದರವಾದ ದೇಶದಲ್ಲಿ ಬದುಕುತ್ತಿದ್ದೇವೆ. ಕ್ಷುಲ್ಲಕ ಅಸ್ಪಷ್ಟತೆ ಸಮಸ್ಯೆಗಳ ಬಗ್ಗೆ ಕಟ್ಟುಬೀಳಬಾರದು. ಕೊನೆಯಾದಾಗಿ ಹೇಳುವುದೇನೆಂದರೆ ಭಾರತದಲ್ಲಿ ನನಗಿಂತ ದೊಡ್ಡ ದೇಶಪ್ರೇಮಿ ಮತ್ತೊಬ್ಬರಿಲ್ಲ. ಭಾರತೀಯನಾಗಿ ಹೆಮ್ಮ ಪಡುವ ವ್ಯಕ್ತಿಯಾಗಿದ್ದೇನೆಂದು ಹೇಳಿದ್ದಾರೆ.

ಇದೇ ವೇಳೆ ಈ ಹಿಂದೆ ತಾವು ನೀಡಿದ್ದ ಅಸಹಿಷ್ಣುತೆ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಜಾತಿ, ಧರ್ಮ, ವರ್ಣ, ಮತ ವಿಡಿದು ದೇಶದಲ್ಲಿ ಅಸಹಿಷ್ಣುತೆಯಿಂದಿರಬೇಡಿ ಎಂದು ಯುವ ಜನತೆಗೆ ನಾನು ಸಲಹೆಯನ್ನು ನೀಡಿದ್ದೆ ವಿನಃ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿಲ್ಲ.

ನಾನು ತಂದೆ ಕಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದವರು. ಬದುಕಲು ದೇಶ ಸುರಕ್ಷಿತ ತಾಣವಲ್ಲ ಎಂದು ನಾನು ಹೇಗೆ ಆಲೋಚನೆ ಮಾಡಲು ಸಾಧ್ಯ? ದೇಶದಿಂದ ಎಲ್ಲವನ್ನೂ ಪಡೆದು ದೇಶದ ವಿರುದ್ಧ ದೂರು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com