'ಹೆಬ್ಬುಲಿ'ಗೆ ಅಮಲಾ ಪೌಲ್?

ಎಸ್ ಕೃಷ್ಣ ನಿರ್ದೇಶನದ, ಸುದೀಪ್ ನಟನೆಯ 'ಹೆಬ್ಬುಲಿ' ಸಿನೆಮಾದ ಚಿತ್ರೀಕರಣ ಮೇ ಮೊದಲ ವಾರದಿಂದ ಪ್ರಾರಂಭವಾಗಲಿದೆ. ಇನ್ನೂ ನಾಯಕ ನಟಿಯ ಬಗ್ಗೆ ಅನಿಶ್ಚಿತತೆ ಮುಂದುವರೆದಿದ್ದು,
ನಟಿ ಅಮಲಾ ಪೌಲ್
ನಟಿ ಅಮಲಾ ಪೌಲ್
Updated on: 

ಬೆಂಗಳೂರು: ಎಸ್ ಕೃಷ್ಣ ನಿರ್ದೇಶನದ, ಸುದೀಪ್ ನಟನೆಯ 'ಹೆಬ್ಬುಲಿ' ಸಿನೆಮಾದ ಚಿತ್ರೀಕರಣ ಮೇ ಮೊದಲ ವಾರದಿಂದ ಪ್ರಾರಂಭವಾಗಲಿದೆ. ಇನ್ನೂ ನಾಯಕ ನಟಿಯ ಬಗ್ಗೆ ಅನಿಶ್ಚಿತತೆ ಮುಂದುವರೆದಿದ್ದು, ಕನ್ನಡ ಚಿತ್ರೋದ್ಯಮ, ದಕ್ಷಿಣ ಭಾರತ ಚಿತ್ರೋದ್ಯಮದ ಹಲವು ಹೆಸರುಗಳು ಕೇಳಿ ಬರುತ್ತಿದ್ದು ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಅಮಲಾ ಪೌಲ್ ಆಯ್ಕೆಯಾಗಿದ್ದಾರೆ ಎನ್ನುತ್ತವೆ ಮೂಲಗಳು.

ಮೂಲಗಳ ಪ್ರಕಾರ ನಟಿಯನ್ನು ಈಗಾಗಲೇ ಸಂಪರ್ಕಿಸಲಾಗಿದ್ದು ಅಧಿಕೃತ ಘೋಷಣೆಗೂ ಮುಂಚಿತವಾಗಿ ದಿನಾಂಕಗಳ ಹೊಂದಾಣಿಕೆಯ ಬಗ್ಗೆ ಮಾತುಕತೆ ನಡೆಸಿದ್ದಾರಂತೆ. ಎಲ್ಲವೂ ಸರಿಬಂದರೆ ಸುದೀಪ್ ಎದುರಿಗೆ ಅಮಲಾ ನಟಿಸಲಿದ್ದಾರೆ ಎನ್ನುತವೆ ಮೂಲಗಳು.

ಒಳ್ಳೆಯ ಸ್ಕ್ರಿಪ್ಟ್ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಕಾಯುತ್ತಿದ್ದ ಅಮಲಾ 'ಹೆಬ್ಬುಲಿ' ಕಥೆಯನ್ನು ಮೆಚ್ಚಿದ್ದಾರಂತೆ. "'ಹೆಬ್ಬುಲಿ' ಸಿನೆಮಾದ ನಿರೀಕ್ಷೆಗಳು ಬೆಟ್ಟದಷ್ಟಿವೆ. ಕೋಟಿಗೊಬ್ಬ-೨ ಸಿನೆಮಾದಲ್ಲಿ ಸುದೀಪ್ ಎದುರು ಖ್ಯಾತ ದಕ್ಷಿಣ ಭಾರತದ ನಟಿ ನಿತ್ಯಾ ಮೆನನ್ ನಟಿಸಿದ್ದು, ಅವರ ಅಭಿಮಾನಿಗಳು ಈ ಚಿತ್ರದಲ್ಲೂ ಖ್ಯಾತ ನಟಿಯನ್ನೇ ಕಾಣ ಬಯಸುತ್ತಾರೆ. ಆದುದರಿಂದ ಬಹಳಷ್ಟು ಹುಡುಕಿದ ನಂತರ ಅಮಲಾ ಆಯ್ಕೆಯಾಗಿದ್ದಾರೆ" ಎನ್ನುತ್ತವೆ ಮೂಲಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com