ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಶಾರುಖ್, ಅಕ್ಷಯ್!

ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಖ್ಯಾತ ಅಂತಾರಾಷ್ಟ್ರೀಯ ನಿಯತಕಾಲಿಕೆ ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಪಟ್ಟಿಯ ಟಾಪ್ 10ರಲ್ಲಿ ಬಾಲಿವುಡ್ ನಟರಾದ ಶಾರುಖ್ ಖಾನ್ ಹಾಗೂ ನಟ ಅಕ್ಷಯ್ ಕುಮಾರ್ ಸ್ಥಾನಗಳಿಸಿದ್ದಾರೆ.
ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ (ಸಂಗ್ರಹ ಚಿತ್ರ)
ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ (ಸಂಗ್ರಹ ಚಿತ್ರ)
Updated on: 

ವಾಷಿಂಗ್ಟನ್: ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಖ್ಯಾತ ಅಂತಾರಾಷ್ಟ್ರೀಯ ನಿಯತಕಾಲಿಕೆ ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಪಟ್ಟಿಯ ಟಾಪ್ 10ರಲ್ಲಿ ಬಾಲಿವುಡ್  ನಟರಾದ ಶಾರುಖ್ ಖಾನ್ ಹಾಗೂ ನಟ ಅಕ್ಷಯ್ ಕುಮಾರ್ ಸ್ಥಾನಗಳಿಸಿದ್ದಾರೆ.

ಅತೀ ಹೆಚ್ಚು ಸಂಭಾವನೆ ಪಡೆಯುವ 20 ನಟರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಈ ಪೈಕಿ 33 ಮಿಲಿಯನ್ ಡಾಲರ್ ಗಳಿಸುತ್ತಿರುವ ನಟ ಶಾರುಖ್ 8ನೇ ಸ್ಥಾನದಲ್ಲಿದ್ದರೆ, 31.5  ಮಿಲಿಯನ್ ಡಾಲರ್ ಹಣ ಗಳಿಕೆಯೊಂದಿಗೆ ನಟ ಅಕ್ಷಯ್ ಕುಮಾರ್ 10 ನೇ ಸ್ಥಾನದಲ್ಲಿದ್ದಾರೆ. 28.5 ಮಿಲಿಯನ್ ಡಾಲರ್ ಗಳಿಕೆಯೊಂದಿಗೆ ಸಲ್ಮಾನ್ ಖಾನ್ 14ನೇ ಸ್ಥಾನದಲ್ಲಿದ್ದರೆ, 20  ಮಿಲಿಯನ್ ಡಾಲರ್ ಗಳಿಕೆಯೊಂದಿಗೆ ಬಿಗ್ ಬಿ ಅಮಿತಾಬ್ ಬಚ್ಚನ್ 18 ನೇ ಸ್ಥಾನದಲ್ಲಿದ್ದಾರೆ.

ಇಡೀ ವಿಶ್ವದಲ್ಲೇ ಅತೀ ಹೆಚ್ಚು ಗಳಿಕೆ ಮಾಡುತ್ತಿರುವ ನಟ ಎಂಬ ಖ್ಯಾತಿಗೆ ರೆಸ್ಲಿಂಗ್ ಲೆಜೆಂಡ್ ಡ್ವೇನ್ ಜಾನ್ಸನ್ (ದಿ ರಾಕ್) ಒಳಗಾಗಿದ್ದಾರೆ. ರೆಸ್ಲಿಂಗ್ ನೊಂದಿಗೆ ಹಾಲಿವುಡ್ ನಲ್ಲಿ ಸಿನಿಮಾಗಳ  ಮುಖಾಂತರ ಖ್ಯಾತು ಉತ್ತುಂಗಕ್ಕೇರಿರುವ ಡ್ವೇನ್ ಜಾನ್ಸನ್ ಬರೊಬ್ಬರಿ 64.5 ಮಿಲಿಯನ್ ಡಾಲರ್ ಗಳಿಸುತ್ತಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ. ವಿಶ್ವದ ಅತ್ಯಂತ ಹೆಚ್ಚು ಸಂಭಾವನೆ  ಪಡೆಯುವ ನಟಿ ಜನಿಫರ್ ಲಾರೆನ್ಸ್ ಅವರಿಗಿಂತಲೂ ದಿರಾಕ್  20 ಮಿಲಿಯನ್ ಡಾಲರ್ ಹೆಚ್ಚು ಗಳಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನು ಎರಡನೇ ಸ್ಥಾನದಲ್ಲಿ ಖ್ಯಾತ ನಟ ಜಾಕಿಚಾನ್ ಇದ್ದು, ಅವರು 61 ಮಿಲಿಯನ್ ಡಾಲರ್ ಹಣ ಗಳಿಸುತ್ತಿದ್ದಾರೆ. ಅವರ ಬಳಿಕದ ಸ್ಥಾನದಲ್ಲಿ 55 ಮಿಲಿಯನ್ ಡಾಲರ್ ಹಣದೊಂದಿಗೆ ಮಾರ್ಟನ್  ಖ್ಯಾತಿಯ ಮ್ಯಾಟ್ ಡಮನ್, 53 ಮಿಲಿಯನ್ ಡಾಲರ್ ನೊಂದಿಗೆ ಟಾಮ್ ಕ್ರೂಸ್, 48 ಮಿಲಿಯನ್ ಡಾಲರ್ ಹಣದೊಂದಿಗೆ ಜಾನಿ ಡೆಪ್ ಟಾಪ್ 5 ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಉಳಿದಂತೆ ಪಟ್ಟಿಯಲ್ಲಿ ಟೈಟಾನಿಕ್ ಖ್ಯಾತಿ ಲಿಯನಾರ್ಡೋ ಡಿಕಾರ್ಪಿಯೋ (27 ಮಿಲಿಯನ್ ಡಾಲರ್), ಜುರಾಸಿಕ್ ವರ್ಲ್ಡ್ ಖ್ಯಾತಿಯ ಕ್ರಿಸ್ ಪ್ರಾಟ್, ಹಾಗೂ ಮೆನ್ ಇನ್ ಬ್ಲಾಕ್ ಖ್ಯಾತಿಯ ವಿಲ್  ಸ್ಮಿತ್ ಕೂಡ ಪಟ್ಟಿಯಲ್ಲಿ ಸ್ಥಾನಗಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com