ಜಾಗ್ವಾರ್ ಚಿತ್ರದಲ್ಲಿ ತಮನ್ನಾ ಭಾಟಿಯಾ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯಿಸುತ್ತಿರುವ ದ್ವಿಭಾಷೆ ಚಿತ್ರ ಜಾಗ್ವಾರ್ ನಲ್ಲಿ ...
ತಮನ್ನಾ ಭಾಟಿಯಾ-ನಿಖಿಲ್ ಗೌಡ
ತಮನ್ನಾ ಭಾಟಿಯಾ-ನಿಖಿಲ್ ಗೌಡ
Updated on
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯಿಸುತ್ತಿರುವ ದ್ವಿಭಾಷೆ ಚಿತ್ರ ಜಾಗ್ವಾರ್ ನಲ್ಲಿ ಚಿತ್ರ ಮತ್ತು ಪ್ರೇಕ್ಷಕರ ನಡುವಿನ ಅಂತರವನ್ನು ಕಡಿಮೆ ಮಾಡಲು, ಜನಪ್ರಿಯ ತಾರೆಗಳನ್ನು ಸೇರಿಸಲು ನಿರ್ಧರಿಸಿದೆ.
ಬಾಲಿವುಡ್ ನಟಿ ಕತ್ರಿನಾ ಕೈಫ್ ಬರುತ್ತಾರೆ ಎಂಬ ಗಾಳಿಸುದ್ದಿ ಹಬ್ಬಿತ್ತಾದರೂ ಇದೀಗ ಆ ಜಾಗಕ್ಕೆ ಶೃತಿ ಹಾಸನ್ ಬಂದಿದ್ದಾರೆ. ಇದೀಗ ಚಿತ್ರದ ನಿರ್ಮಾಣ ಸಂಸ್ಥೆಯಿಂದ ಬಂದಿರುವ ನಿಖರ ಮಾಹಿತಿ ಪ್ರಕಾರ ತಮ್ಮನ್ನಾ ಭಾಟಿಯಾ ಕೂಡ ಚಿತ್ರದ ಭಾಗವಾಗಲಿದ್ದಾರಂತೆ.
''ತಮನ್ನಾ ಅವರು ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದು ಸೆಪ್ಟೆಂಬರ್ 10ರ ನಂತರ ಹೈದರಾಬಾದಿನಲ್ಲಿ ಶೂಟಿಂಗ್ ನಡೆಸುವ ಯೋಜನೆಯಲ್ಲಿದೆ ಚಿತ್ರತಂಡ'' ಎಂಬ ಮಾಹಿತಿ ಸಿಕ್ಕಿದೆ. ನಿಖಿಲ್  ಹಾಡಿನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ಈ ಮಧ್ಯೆ ಜಾಗ್ವಾರ್ ಚಿತ್ರತಂಡ ಆಡಿಯೋ ಬಿಡುಗಡೆ ಕೆಲಸದಲ್ಲಿ ತೊಡಗಿದೆ. ನಾಳೆ ಮಂಡ್ಯದಲ್ಲಿ ದೊಡ್ಡ ಸಮಾರಂಭ ಏರ್ಪಡಿಸಲಾಗಿದ್ದು, ಅನೇಕ ಖ್ಯಾತ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
ಚೆನ್ನಾಂಬಿಕ ಪ್ರೊಡಕ್ಷನ್ ನಡಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ನಿರ್ಮಿಸುತ್ತಿರುವ ಚಿತ್ರವನ್ನು ಎ.ಮಹದೇವ್ ನಿರ್ದೇಶಿಸುತ್ತಿದ್ದಾರೆ. ಕೆ.ವಿ.ವಿಜೇಂದ್ರ ಪ್ರಸಾದ್ ಬರೆದಿರುವ ಚಿತ್ರಕ್ಕೆ ಎಸ್. ತಮನ್ ಸಂಗೀತ ನೀಡಿದ್ದಾರೆ. ಮನೋಜ್ ಪರಮಹಂಸ ಅವರ ಸಂಕಲನವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com