

ಮುಂಬೈ: ಸದಾಕಾಲ ಒಂದಲ್ಲ ಒಂದು ಹೇಳಿಕೆ ನೀಡಿದ ವಿವಾದಕ್ಕೀಡಾಗುತ್ತಿದ್ದ ಐಟಂಗರ್ಲ್ ರಾಖಿ ಸಾವಂತ್ ಅವರು ಇದೀಗ ಶಾಕಿಂಗ್ ನ್ಯೂಸ್ ವೊಂದನ್ನು ಬಹಿರಂಗಪಡಿಸಿದ್ದು, ಸ್ವಯಂವರ ಎಂಬ ಕಾರ್ಯಕ್ರಮದಲ್ಲಿ ವಿಜೇತನಾದ ಇಲೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಕೇವಲ ದುಡ್ಡಿಗಾಗಿ ಎಂದು ಹೇಳಿಕೊಂಡಿದ್ದಾರೆ.
ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ವಾಹಿನಿಯೊಂದರಲ್ಲಿ ರಾಖಿ ಕಾ ಸ್ವಯಂವರ್ ಎಂಬ ಕಾರ್ಯಕ್ರಮವೊಂದು ಪ್ರಸಾರವಾಗಿತ್ತು. ರಾಖಿಯನ್ನು ಮದುವೆಯಾಗಲೆಂದು ಸಾಕಷ್ಟು ಯುವಕರು ಕಾರ್ಯಕ್ರಮದಲ್ಲಿ ಭಾಗವಿಸಿದ್ದರು. ಸಾಕಷ್ಟು ಟಾಸ್ಕ್ ಗಳು ಹಾಗೂ ಪರೀಕ್ಷೆಗಳ ನಂತರ ಕೊನೆಯದಾಗಿ ಮೂವರು ಯುವಕರನ್ನು ಆಯ್ಕೆ ಮಾಡಿದ್ದ ರಾಖಿ, ಅಂತಿಮವಾಗಿ ಅನಿವಾಸಿ ಭಾರತೀಯನಾಗಿದ್ದ ಇಲೇಶ್ ಪರುಜುವಾಲಾ ಎಂಬವವರನ್ನು ಆಯ್ಕೆ ಮಾಡಿದ್ದರು. ಇದರಂತೆ ಸ್ವಯಂವರ ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಇಲೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ದೊಡ್ಡ ಸುದ್ದಿ ಮಾಡಿದ್ದರು.
ಇದೀಗ ಇಲೇಸ್ ಜೊತೆಗಿನ ನಿಶ್ಚಿತಾರ್ಥದ ಹಿಂದಿನ ಮರ್ಮವನ್ನು ರಾಖಿ ಬಹಿರಂಗಪಡಿಸಿದ್ದು, ಇಲೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಕೇವಲ ದುಡ್ಡಿಗಾಗಿ ಅಷ್ಟೇ. ನನಗೆ ಫ್ಲಾಟ್ ವೊಂದನ್ನು ಖರೀದಿಸಬೇಕಿದ್ದು. ಖರೀದಿ ಮಾಡಲು ಹಣ ಬೇಕಿದ್ದು. ಹೀಗಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದೆ ಎಂದು ಹೇಳಿದ್ದಾರೆ.
ಸುಖಾ ಸುಮ್ಮನೆ ಮದುವೆಯಾಗಿ ತದನಂತರ ವಿಚ್ಛೇದನ ನೀಡುವುದು ಸರಿಯಲ್ಲ. ಹಾಗೂ ಅದನ್ನು ನಿಶ್ಚಿತಾರ್ಥದಲ್ಲಿಯೇ ಮುಗಿಸಿದ್ದೆ. ಪ್ರಸ್ತುತ ಯಾರೊಂದಿಗೂ ನಾನು ಡೇಟಿಂಗ್ ಮಾಡುತ್ತಿಲ್ಲ ಎಂದಿದ್ದಾರೆ.
ಇದೇ ವೇಳೆ ಮದುವೆಯಾಗದೆ ಉಳಿದಿರುವುದಕ್ಕೆ ಕಾರಣ ನೀಡಿರವ ಅವರು, ಖಂಡಿತವಾಗಿಯೂ ಮದುವೆಯಾಗುತ್ತೇನೆ. ಸರಿಯಾದ ಜೋಡಿ ಸಿಗುತ್ತಿಲ್ಲ. ಮಾಧ್ಯಮಗಳು ನನ್ನ ಇಮೇಜನ್ನು ಹಾಳು ಮಾಡಿದ್ದು, ಹೀಗಾಗಿ ಒಳ್ಳೆಯ ಹುಡುಗ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.