ನಟ ದರ್ಶನ್ ಗಾಗಿ ಸಂಪ್ರದಾಯಸ್ಥೆಯಾಗಲಿದ್ದಾರಂತೆ ರಚಿತಾ ರಾಮ್

ಜಗ್ಗು ದಾದಾ ಸಿನಿಮಾದಲ್ಲಿ ರಚಿತಾ ರಾಮ್ ಅವರು ದರ್ಶನ್ ಜೊತೆ ಅಭಿನಯಿಸುತ್ತಿದ್ದಾರೆ. ಜಗ್ಗುದಾದ ಸಿನಿಮಾದಲ್ಲಿ ರಚಿತಾ ರಾಮ್ ಅತಿಥಿ ಪಾತ್ರದಲ್ಲಿ ಸಂಪ್ರದಾಯಬದ್ಧ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ರಚಿತಾ ರಾಮ್
ರಚಿತಾ ರಾಮ್

ಬೆಂಗಳೂರು: ಬುಲ್ ಬುಲ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ರಚಿತಾ ರಾಮ್ ಈಗಾಗಲೇ ಕನ್ನಡ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ನಟ ದರ್ಶನ್ ಜೊತೆ ಬುಲ್ ಬುಲ್, ಅಂಬರೀಷ ಚಿತ್ರದಲ್ಲಿ ನಟಿಸಿದ್ದ ರಚಿತಾ ಇದೀಗ ಮತ್ತೊಮ್ಮೆ ದರ್ಶನ್ ಅವರ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಜಗ್ಗು ದಾದಾ ಸಿನಿಮಾದಲ್ಲಿ ರಚಿತಾ ರಾಮ್ ಅವರು ದರ್ಶನ್ ಜೊತೆ ಅಭಿನಯಿಸುತ್ತಿದ್ದಾರೆ. ಜಗ್ಗುದಾದ ಸಿನಿಮಾದಲ್ಲಿ ರಚಿತಾ ರಾಮ್ ಅತಿಥಿ ಪಾತ್ರದಲ್ಲಿ ಸಂಪ್ರದಾಯಬದ್ಧ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಸಿನಿಮಾದಲ್ಲಿ ನಟಿಸಲು ಅವಕಾಶ ಬಂದಾಗ ರಚಿತಾ ರಾಮ್ ಹಿಂದೆ ಮುಂದೆ ನೋಡದೇ ಒಂದೇ ಬಾರಿಗೆ ಒಪ್ಪಿಕೊಂಡ್ರಂತೆ. ಎರಡು ದಿನಗಳ ಕಾಲ ರಚಿತಾ ರಾಮ್ ಪಾತ್ರಕ್ಕಾಗಿ ಶೂಟಿಂಗ್ ನಡೆಯಲಿದ್ದು, ಈಗಾಗಲೇ ಒಂದು ದಿನದ ಶೂಟಿಂಗ್ ನಲ್ಲಿ ರಚಿತಾ ಭಾಗಿಯಾಗಿದ್ದಾರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com