ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ: ರಾಜಮೌಳಿ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ದಕ್ಷಿಣ ಭಾರತದ ಖ್ಯಾತ ನಿರ್ದೇಶನಕ ಎಸ್ ಎಸ್ ರಾಜಮೌಳಿ ಅವರು ನಾನು ಹುಟ್ಟಿದ್ದು ಕರ್ನಾಟಕ(ರಾಯಚೂರು)ದಲ್ಲಿ, ಓದಿದ್ದು....
ರಾಜಮೌಳಿ
ರಾಜಮೌಳಿ
Updated on: 

ಬೆಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ದಕ್ಷಿಣ ಭಾರತದ ಖ್ಯಾತ ನಿರ್ದೇಶನಕ ಎಸ್ ಎಸ್ ರಾಜಮೌಳಿ ಅವರು ನಾನು ಹುಟ್ಟಿದ್ದು ಕರ್ನಾಟಕ(ರಾಯಚೂರು)ದಲ್ಲಿ, ಓದಿದ್ದು ಆಂಧ್ರಪ್ರದೇಶದಲ್ಲಿ, ಕೆಲಸ ಮಾಡುತ್ತಿರುವುದು ತಮಿಳುನಾಡಿನಲ್ಲಿ, ವಾಸವಾಗಿರೋದು ಆಂಧ್ರಪ್ರದೇಶದ ತೆಲಂಗಾಣದಲ್ಲಿ. ಹಾಗಾಗಿ ನಾನು ಎಲ್ಲಾ ರಾಜ್ಯಗಳಿಗೆ ಸೇರಿದ ಮಣ್ಣಿನ ಮಗನಾಗಿರುವುದಕ್ಕೆ ಸಂತಸವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಷಯ ಕೇಳಿ ನಿಜಕ್ಕೂ ನನಗೆ ಅಚ್ಚರಿಯಾಯಿತು ಎಂದು ರಾಜಮೌಳಿ ಟ್ವೀಟಿಸಿದ್ದು, ಈ ಬಾರಿ ಕರ್ನಾಟಕ ಸರ್ಕಾರ ನನ್ನ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ನಾನು ಈ ಪ್ರಶಸ್ತಿಗೆ ಅರ್ಹ ಹೌದೋ ಅಲ್ಲವೋ ಗೊತ್ತಿಲ್ಲ. ಆದರೂ ಈ ಪ್ರಶಸ್ತಿ ಬಂದಿದ್ದಕ್ಕೆ ಆಭಾರಿಯಾಗಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಮೂಲತಃ ಕರ್ನಾಟಕದ ರಾಯಚೂರಿನವರಾಗಿರುವ ಎಸ್.ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com