

ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ನೂತನ ಟಗರು ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.
ಚಿತ್ರವನ್ನು ದುನಿಯಾ ಸೂರಿ ನಿರ್ದೇಶಿಸಿದ್ದು, ಕಡ್ಡಿಪುಡಿ ಚಿತ್ರದಲ್ಲಿ ಶಿವಣ್ಣ-ಸೂರಿ ಜೋಡಿ ಕಮಾಲ್ ಮಾಡಿತ್ತು. ಇದೀಗ ಈ ಜೋಡಿ ಮತ್ತೆ ಟಗರು ಚಿತ್ರದ ಮೂಲಕ ಒಂದಾಗಿದ್ದಾರೆ.
ಚಿತ್ರಕ್ಕೆ ಟಗರು ಎಂಬ ಶೀರ್ಷಿಕೆ ಇಡಲಾಗಿದ್ದು ಮೈ ಎಲ್ಲ ಪೊಗರು ಎಂದು ಟ್ಯಾಗ್ ಲೈನ್ ಕೊಡಲಾಗಿದೆ. ಚಿತ್ರವನ್ನು ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಲಿದ್ದಾರೆ.