ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರ 'ಕಬಾಲಿ' ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಚೆನ್ನೈ ಮತ್ತು ಬೆಂಗಳೂರಿನ ಕೆಲವು ಸ್ಟಾರ್ಟ್-ಅಪ್ ಸಂಸ್ಥೆಗಳು ಬಿಡುಗಡೆಯ ದಿನವಾದ ಶುಕ್ರವಾರ ರಜೆ ಘೋಷಿಸಿದ್ದಾರೆ, ಅಂತರ್ಜಾಲ ಗ್ರಾಹಕರಿಗೆ ಕುಂದು ಕೊರತೆ ನೋಡಿಕೊಳ್ಳುವ ಸಾಫ್ಟ್ವೇರ್ ಸಂಸ್ಥೆಯೊಂದು ತನ್ನ ನೌಕರಿಗಾಗಿ ಇಡೀ ಚಿತ್ರಮಂದಿರವನ್ನೇ ಮುಂಗಡ ಕಾಯ್ದಿರಿಸಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಈ ಸಂಸ್ಥೆಯ ಅಧಿಕಾರಿಗಳು ಒಂದು ಪ್ರಮುಖ ಥಿಯೇಟರ್ ಅನ್ನು ಪೂರ್ಣವಾಗಿ ಮುಂಗಡ ಕಾಯ್ದಿರಿಸಲು ಮಾತುಕತೆ ನಡೆಸಿದೆ.