ಸುದೀಪ್ ಜೊತೆಗೆ ನಟಿಸುವಾಸೆ: ತಮಿಳು ನಟ ಧನುಷ್

ಕನ್ನಡ ಸೂಪರ್ ಸ್ಟಾರ್ ಸುದೀಪ್ ಜೊತೆಗೆ ತೆರೆ ಹಂಚಿಕೊಳ್ಳುವಾಸೆ ಎಂದಿದ್ದಾರೆ ತಮಿಳಿನ ಖ್ಯಾತ ನಟ-ನಿರ್ಮಾಪಕ ಧನುಷ್.
ತಮಿಳಿನ ಖ್ಯಾತ ನಟ-ನಿರ್ಮಾಪಕ ಧನುಷ್ ಮತ್ತು ಕನ್ನಡ ಸೂಪರ್ ಸ್ಟಾರ್ ಸುದೀಪ್
ತಮಿಳಿನ ಖ್ಯಾತ ನಟ-ನಿರ್ಮಾಪಕ ಧನುಷ್ ಮತ್ತು ಕನ್ನಡ ಸೂಪರ್ ಸ್ಟಾರ್ ಸುದೀಪ್
ಚೆನ್ನೈ: ಕನ್ನಡ ಸೂಪರ್ ಸ್ಟಾರ್ ಸುದೀಪ್ ಜೊತೆಗೆ ತೆರೆ ಹಂಚಿಕೊಳ್ಳುವಾಸೆ ಎಂದಿದ್ದಾರೆ ತಮಿಳಿನ ಖ್ಯಾತ ನಟ-ನಿರ್ಮಾಪಕ ಧನುಷ್. 
"ಸುದೀಪ್ ಜೊತೆಗೆ ನಟಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತಲೇ ಬಂದಿದ್ದೇನೆ. ಅವರ ಜೊತೆಗೆ ಶೀಘ್ರದಲ್ಲೇ ಕೆಲಸ ಮಾಡುವೆ ಆಸೆಯಿದೆ" ಎಂದು ಧನುಷ್ ವರದಿಗಾರರಿಗೆ ಹೇಳಿದ್ದಾರೆ. 
ಸುದೀಪ್ ನಟನೆಯ ದ್ವಿಭಾಷಾ ಚಲನಚಿತ್ರ 'ಕೋಟಿಗೊಬ್ಬ-2/ ಮುಡಿಂಜ ಇವನ ಪುಡಿ' ಸಿನೆಮಾದ ಆಡಿಯೋ ಬಿಡುಗಡೆ ವೇಳೆಯಲ್ಲಿ ಅವರು ಮಾತನಾಡುತ್ತಿದ್ದರು, ಈ ಸಮಯದಲ್ಲಿ ತಮಿಳು ನಟರಾದ ವಿಜಯ್ ಸೇತುಪತಿ ಮತ್ತು ಶಿವಕಾರ್ತಿಕೇಯನ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
"ನಾನು ಈಗಗಾಲೇ ವಿಜಯ್ ಸೇತುಪತಿ ಮತ್ತು ಶಿವಕಾರ್ತಿಕೇಯನ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಈಗ ಸುದೀಪ್ ಜೊತೆಗೆ ಕೆಲಸ ಮಾಡುವ ಅವಕಾಶಕ್ಕೆ ಕಾಯುತ್ತಿದ್ದೇನೆ" ಎಂದು ಧನುಷ್ ಹೇಳಿದ್ದಾರೆ. 
ಈ ಚಿತ್ರದಲ್ಲಿ ಸುದೀಪ್ ಎದುರು ನಿತ್ಯಾ ಮೆನನ್ ನಟಿಸಿದ್ದು "ಅವರು ಅದ್ಭುತ ನಟಿಯರಲ್ಲಿ ಒಬ್ಬರು. ಅವರ ಕೆಲಸ ನನಗಿಷ್ಟ" ಎಂದು ಧನುಷ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com