

ಚೆನ್ನೈ: ಕಾಲಿವುಡ್ ನ ಖ್ಯಾತ ನಟ ವಿಕ್ರಮ್ ಮಗಳು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರಣಾನಿಧಿಯ ಮರಿ ಮೊಮ್ಮಗನನ್ನು ವರಿಸಲಿದ್ದಾಳೆ.
ಜುಲೈ 10 ಕುರುಣಾನಿಧಿಯ ಮೊದಲ ಪುತ್ರ ಮುತ್ತು ಅವರ ಮೊಮ್ಮಗ ಮನು ರಂಜಿತ್ ಅವರನ್ನು ವಿಕ್ರಮ್ ಪುತ್ರಿ ಅಕ್ಷಿತಾರ ನಿಶ್ಚಿತಾರ್ಥ ನಡೆಯಲಿದ್ದು, ಇನ್ನು 2017ರಲ್ಲಿ ಮದುವೆ ನಡೆಯಲಿದೆ.
ಸದ್ಯ ಇರು ಮುಗನ್ ಚಿತ್ರದಲ್ಲಿ ವಿಕ್ರಮ್ ಬ್ಯುಸಿಯಾಗಿದ್ದು, ಕೆಲವು ದಿನಗಳ ಕಾಲ ಬಿಡುವು ತೆಗೆದುಕೊಂಡು ನಿಶ್ಚಿತಾರ್ಥ ಕೆಲಸದಲ್ಲಿ ಭಾಗಿಯಾಗಲಿದ್ದಾರೆ.