ನೇಪಾಳಿ ಸಿನೆಮಾ ನಕಲು ಆರೋಪ; ಶಿರಿಶ್ ಕುಂದರ್ 'ಕೃತಿ' ಸಿನೆಮಾ ಯೂಟ್ಯೂಬ್ ನಿಂದ ಹೊರಕ್ಕೆ

ನಿರ್ದೇಶಕ ಶಿರಿಶ್ ಕುಂದರ್ ಅವರ 'ಕೃತಿ' ಸಣ್ಣ ಸಿನೆಮಾ ಅಂತರ್ಜಾಲದಲ್ಲಿ ಬಿಡುಗಡೆಯಾದಾಗಲಿಂದಲೂ ಅದರ ಬಗ್ಗೆ ಅಪಾರ ಪ್ರಶಂಸೆಗಳು ಕೇಳಿಬಂದಿದ್ದವು. ಮನೋಜ್ ಬಾಜಪೇಯಿ,
'ಬಾಬ್' ಮತ್ತು 'ಕೃತಿ' ಸಿನೆಮಾಗಳು ಪೋಸ್ಟರ್ ಗಳು
'ಬಾಬ್' ಮತ್ತು 'ಕೃತಿ' ಸಿನೆಮಾಗಳು ಪೋಸ್ಟರ್ ಗಳು
Updated on
ನವದೆಹಲಿ: ನಿರ್ದೇಶಕ ಶಿರಿಶ್ ಕುಂದರ್ ಅವರ 'ಕೃತಿ' ಸಣ್ಣ ಸಿನೆಮಾ ಅಂತರ್ಜಾಲದಲ್ಲಿ ಬಿಡುಗಡೆಯಾದಾಗಲಿಂದಲೂ ಅದರ ಬಗ್ಗೆ ಅಪಾರ ಪ್ರಶಂಸೆಗಳು ಕೇಳಿಬಂದಿದ್ದವು. ಮನೋಜ್ ಬಾಜಪೇಯಿ, ನೇಹಾ ಶರ್ಮಾ ಮತ್ತು ರಾಧಿಕಾ ಆಪ್ಟೆ ಅಂತಹ ಜನಪ್ರಿಯ ನಟರು ನಟಿಸಿದ್ದ ಈ ಸಿನೆಮಾವನ್ನು ವಿಮರ್ಶಕ-ಪ್ರೇಕ್ಷಕ ವರ್ಗ ಹೊಗಳಿತ್ತು. ಆದರೆ ನೇಪಾಳದ ನಿರ್ದೇಶಕನೊಬ್ಬ 'ಕೃತಿ' ತನ್ನ ಸಿನೆಮಾದ ನಕಲು ಎಂದು ಆರೋಪಿಸಿರುವುದಕ್ಕೆ ಈಗ ವಿಡಿಯೋ ತಾಣ ಯೂಟ್ಯೂಬ್ 'ಕೃತಿ'ಯನ್ನು ತೆಗೆದುಹಾಕಿದೆ. 
ಯೂಟ್ಯೂಬ್ ಈ ಸಿನೆಮಾವನ್ನು ತೆಗೆದುಹಾಕುವುದಕ್ಕೂ ಮುಂಚಿತವಾಗಿ 25 ಲಕ್ಷಕ್ಕೂ ಹೆಚ್ಚು ಬಾರಿಗೆ ವೀಕ್ಷಣೆಯಾಗಿತ್ತು. 
ಈ ಸಿನೆಮಾ ಬಿಡುಗಡೆಯಾದ ನಂತರ ಫೇಸ್ಬುಕ್ ನಲ್ಲಿ ಆರೋಪ ಮಾಡಿದ್ದ ನೇಪಾಳಿ ನಿರ್ದೇಶಕ ಅನಿಲ್ ನೇಯುಪಾನೇ "ಮಿಸ್ಟರ್ ಶಿರಿಶ್ ಕುಂದರ್ ನನ್ನ ಸಿನೆಮಾದ ಪ್ಲಾಟ್ ಕದ್ದು ಸಿನೆಮಾ ಮಾಡಿರುವುದು ನನಗೆ ಆಕ್ರೋಶ ತರಿಸಿದೆ. ನಾವು 'ಬಾಬ್' ಸಿನೆಮಾ ನಿರ್ದೇಶಿಸುವಾಗ ಮಧ್ಯಾಹ್ನ ಊಟ ಮಾಡಲು ದುಡ್ಡಿರಲಿಲ್ಲ. ಬಹುಶಃ 'ಕೃತಿ' ಸಿನೆಮಾದ ಸ್ಪಾಟ್ ಬಾಯ್, ನಮಮ್ ಸಿನೆಮಾದ ಇಡೀ ಬಜೆಟ್ ಗಿಂತಲೂ ಹೆಚ್ಚು ಹಣ ಪಡೆದಿದ್ದಾನೆ. ಭಾರತದಿಂದ ಹಣವಂತ ಹುಡುಗನೊಬ್ಬ ನನ್ನ ಸಿನೆಮಾ ಕದ್ದುಬಿಡಲಿ ಎಂದು ನಾನು ಮತ್ತು ನನ್ನ ತಂಡ ಕಷ್ಟ ಪಟ್ಟಿದ್ದಲ್ಲ. ಇದು ಸರಿಯಲ್ಲ" ಎಂದು ದೂರಿದ್ದರು. 
'ಕೃತಿ' ಸಿನೆಮಾದ ಪ್ಲಾಟ್ 'ಬಾಬ್' ಸಿನೆಮಾಗೆ ಬಹಳ ಹತ್ತಿರವಾಗಿದೆ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ನೇಪಾಳಿ ನಿರ್ದೇಶಕನ ಪರವಾಗಿ ನಿಂತು ಬೆಂಬಲಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com