ಏರ್ ಏಷ್ಯಾ ವಿಮಾನದಲ್ಲಿ 'ಕಬಾಲಿ' ಹವಾ

ಕಬಾಲಿ ಚಿತ್ರತಂಡಕ್ಕೆ ವಿಭಿನ್ನವಾಗಿ ಶುಭಕೋರುವ ಉದ್ದೇಶದಿಂದ ಹಾಗೂ ಪ್ರಚಾರಕ್ಕಾಗಿ ಏರ್ ಏಷ್ಯಾ ‘ಕಬಾಲಿ’ ವಿಶೇಷ ವಿಮಾನವನ್ನೇ ಸಿದ್ಧಗೊಳಿಸಿದೆ.
ಏರ್ ಏಷ್ಯಾ ವಿಮಾನದ ಮೇಲೆ ಕಬಾಲಿ ಪೋಸ್ಟರ್
ಏರ್ ಏಷ್ಯಾ ವಿಮಾನದ ಮೇಲೆ ಕಬಾಲಿ ಪೋಸ್ಟರ್

ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಹವಾ ಆರಂಭಗೊಂಡಿದೆ. ಎಲ್ಲೆಡೆ ಕಬಾಲಿ ಬಿಡುಗಡೆ ಪೂರ್ವ ಪ್ರಚಾರ ಶುರುವಾಗಿದ್ದು, ವಿಮಾನಯಾನ ಕಂಪನಿ ಏರ್​ಏಷ್ಯಾ ಈಗ ಅಧಿಕೃತ ಪ್ರಚಾರ ಪಾಲುದಾರರಾಗಿ ಚಿತ್ರ ತಂಡದ ಜತೆ ಕೈಜೋಡಿಸಿದೆ.

ಕಬಾಲಿ ಚಿತ್ರತಂಡಕ್ಕೆ ವಿಭಿನ್ನವಾಗಿ ಶುಭಕೋರುವ ಉದ್ದೇಶದಿಂದ ಹಾಗೂ ಪ್ರಚಾರಕ್ಕಾಗಿ ಏರ್ ಏಷ್ಯಾ ‘ಕಬಾಲಿ’ ವಿಶೇಷ ವಿಮಾನವನ್ನೇ ಸಿದ್ಧಗೊಳಿಸಿದೆ. ವಿಮಾನದ ಮೇಲೆ ಕಬಾಲಿ ಪೊಸ್ಟರ್ ಗಳನ್ನು ಹಾಕಲಾಗಿದೆ.

ರಿಯಾಯಿತಿ ದರದಲ್ಲಿ ಈ ವಿಮಾನದಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶ ಹೊಂದಿರುವ ಏರ್​ಏಷ್ಯಾದ ಈ ವಿಶೇಷ ವಿನ್ಯಾಸದ ‘ಕಬಾಲಿ’ ವಿಮಾನ ಬೆಂಗಳೂರು, ನವದೆಹಲಿ, ಗೋವಾ, ಪುಣೆ, ಚಂಡೀಗಢ, ಜೈಪುರ, ಗುವಾಹಟಿ, ಇಂಪಾಲ್, ವಿಝಾಗ್ ಮತ್ತು ಕೊಚ್ಚಿ ನಡುವೆ ಸಂಪರ್ಕ ಸೇತುವಾಗಿ ಹಾರಾಡಲಿವೆ. ಕಂಪನಿ ಇದಕ್ಕೆಂದೇ ಒಟ್ಟು 6 ವಿಮಾನವನ್ನು ಮೀಸಲಿರಿಸಿದೆ.

ಮೊದಲ ದಿನದ ಮೊದಲ ಶೋವನ್ನು ಚೆನ್ನೈನಲ್ಲಿ ನೋಡಲಿಚ್ಚಿಸುವ ಬೆಂಗಳೂರಿನ ಅಭಿಮಾನಿಗಳಿಗಾಗಿಯೇ ವಿಶೇಷ ವಿಮಾನ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ಬೆಂಗಳೂರಿನಿಂದ ಚೆನ್ನೈ ಗೆ ವಿಶೇಷ ವಿಮಾನ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com