'ಜಿಗರ್ಥಂಡ' ಆಡಿಯೋ ಬಿಡುಗಡೆಯಲ್ಲಿ ಹಾರಲಿರುವ ಡ್ರೋನ್

ತಮಿಳು ಚಿತ್ರದ ರಿಮೇಕ್ 'ಜಿಗರ್ಥಂಡ' ಸಿನೆಮಾದ ನಿರ್ಮಾಕರು ಇಂದು ಆಡಿಯೋ ಬಿಡುಗಡೆಗೆ ಸಜ್ಜಾಗಿದ್ದಾರೆ.
'ಜಿಗರ್ಥಂಡ' ಸಿನೆಮಾದ ಸ್ಟಿಲ್
'ಜಿಗರ್ಥಂಡ' ಸಿನೆಮಾದ ಸ್ಟಿಲ್
Updated on: 

ಬೆಂಗಳೂರು: ತಮಿಳು ಚಿತ್ರದ ರಿಮೇಕ್ 'ಜಿಗರ್ಥಂಡ' ಸಿನೆಮಾದ ನಿರ್ಮಾಕರು ಇಂದು ಆಡಿಯೋ ಬಿಡುಗಡೆಗೆ ಸಜ್ಜಾಗಿದ್ದಾರೆ.

ಈ ಕಾರ್ಯಕ್ರಮವನ್ನು ವಿಶೇಷವಾಗಿಸಲು ಉಸ್ತುವಾರಿ ವಹಿಸಿಕೊಂಡಿರುವ ನಾಯಕನಟ ರಾಹುಲ್, ರವಿಚಂದ್ರನ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದು, ಸುದೀಪ್ ಅವರು 'ಜಿಗರ್ಥಂಡ' ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಮತ್ತೊಂದು ವಿಶೇಷವೆಂದರೆ ಆಡಿಯೋ ಬಿಡುಗಡೆ ವೇಳೆ ಡ್ರೋನ್ ಒಂದರ ವಿಶೇಷ ಉಪಸ್ಥಿತಿಯಿರುತ್ತದಂತೆ. "ನಾವು ಇದನ್ನು ವಿಶೇಷವಾಗಿ ಆಚರಿಸಬೇಕೆಂದು ಹೆಚ್ಚು ಚಿಂತಿಸಿದ ಮೇಲೆ ಆಡಿಯೋ ಬಿಡುಗಡೆಗೆ ಡ್ರೋನ್ ಬಳಸಲಿ ನಿರ್ಧರಿಸಿದೆವು. ಹೇಗೆ ಮತ್ತು ಏಕೆ ಎಂದು ಕಾರ್ಯಕ್ರಮದಲ್ಲೇ ನಿಮಗೆ ತಿಳಿಯಲಿದೆ" ಎನ್ನುತ್ತಾರೆ ರಾಹುಲ್.

ಈ ಕಾರ್ಯಕ್ರಮದಲ್ಲಿ ನಟ ರವಿಶಂಕರ್ ಮೊದಲ ಬಾರಿಗೆ ಹಾಡೊಂದನ್ನು ಹಾಡಲಿದ್ದಾರಂತೆ. ಆ ಹಾಡು ಸಿನೆಮಾದಲ್ಲೂ ಇದೆಯಂತೆ. ಹಾಗೇಯೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ರಸಸಂಜೆಯನ್ನು ಕೂಡ ನಡೆಸಿಕೊಡಲಿದ್ದಾರಂತೆ.

ನಟ ಸುದೀಪ್ ಈ ಸಿನೆಮಾದ ನಿರ್ಮಾಪಕರಲ್ಲಿ ಒಬ್ಬರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com