ಡಿಸೆಂಬರ್ ನಲ್ಲಿ ಸಿನೆಮಾ ಬಿಡುಗಡೆ ಮಾಡುವ ಇರಾದೆ ಹೊಂದಿರುವ ನಿರ್ಮಾಪಕರು ಯಾವುದೇ ವಿರಾಮ ತೆಗೆದುಕೊಳ್ಳದೆ, ಹಬ್ಬದ ಸಮಯದಲ್ಲಿ ಕೂಡ ನಿರಂತರವಾಗಿ ಕೆಲಸ ಮಾಡಿದ್ದಾರೆ. "ಗಣೇಶ ಚತುರ್ಥಿ ಸಮಯದಲ್ಲಿ ತಂಡ ಕಾಶ್ಮೀರದಲ್ಲಿತ್ತು. ದಸರಾ ಸಮಯದಲ್ಲಿ ನಾವು ಸ್ವಿಟ್ಸರ್ ಲ್ಯಾಂಡ್ ನಲ್ಲಿದ್ದೆವು ಮತ್ತು ಈಗ ದೀಪಾವಳಿಯಲ್ಲಿ ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಿದ್ದೆವು" ಎನ್ನುವ ನಿರ್ದೇಶಕ "ಗುರಿಯನ್ನು ನಿಗದಿತ ಸಮಯಕ್ಕೆ ತಲುಪಲು ಹಗಲು ರಾತ್ರಿ ಎನ್ನದೆ ಚಿತ್ರ ತಂಡ ದುಡಿಯುತ್ತಿದೆ" ಎನ್ನುತ್ತಾರೆ.