
ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಬ್ಬರಿಗೆ ಕನ್ನಡಿಯಲ್ಲಿ ವಿಚಿತ್ರ ಆಕೃತಿ ಕಾಣಿಸಿಕೊಂಡಿದ್ದು, ಭಯಭೀತರಾಗಿ ಕಿರುಚಿಕೊಂಡು ಕೆಳಕ್ಕೆ ಬಿದ್ದಿದ್ದಾರೆ. ಇದನ್ನು ಕಂಡ ಇತರ ಸ್ಪರ್ಧಿಗಳು ಕೂಡ ಆತಂಕಕ್ಕೀಡಾಗಿದ್ದಾರೆ.
ಹೌದು, ಕಾರುಣ್ಯಾ ಮತ್ತು ಸಂಜನಾ ವಾಶ್ ರೂಂನಲ್ಲಿ ಮುಖ ತೊಳೆಯಲು ಹೋದ ಸಂದರ್ಭದಲ್ಲಿ ಕನ್ನಡಿಯಲ್ಲಿ ಆಕೃತಿಯೊಂದು ಕಾಣಿಸಿಕೊಂಡು ಇದರಿಂದ ಭಯಭೀತರಾಗಿ ಕಿರುಚಿಕೊಂಡು ಕೆಳಗೆ ಬಿದ್ದರು. ಈ ವೇಳೆ ಒಳಗೆ ಬಂದ ಇತರ ಸಹ ಸ್ಪರ್ಧಿಗಳು ಇದರಿಂದ ಆತಂಕಕ್ಕೀಡಾದ್ದಾರೆ.
ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗಿದ್ದು ಬಿಗ್ ಬಾಸ್ ಮನೆಯನ್ನು ಸಂಪೂರ್ಣವಾಗಿ ಕೆಡವಿ 13 ಕೋಟಿ ವೆಚ್ಚದಲ್ಲಿ 20 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಹೊಸದಾಗಿ ಮನೆ ನಿರ್ಮಿಸಲಾಗಿದೆ.
ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಆಕೃತಿಯನ್ನು ಕಂಡಿರುವುದು ಇದೀಗ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಅವರ ಕಂಡದ್ದು ನಿಜವಾಗಲು ಭೂತವಾ? ಅಥವಾ ಬಿಗ್ ಬಾಸ್ ಅವರಿಗೆ ನೀಡಿರುವ ವಿಶೇಷ ಟಾಸ್ಕ್ ಎಂಬು ಪ್ರಶ್ನೆ ಮೂಡಿದೆ.
Advertisement