ಬಾಹುಬಲಿ-2 ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ

ದೇಶದಲ್ಲಿ 500-1000 ರುಪಾಯಿ ನೋಟು ಬ್ಯಾನ್ ಆದ ಬೆನ್ನಲ್ಲೇ ಆದಾಯ ತೆರಿಗೆ ಅಧಿಕಾರಿಗಳು ಹಲವು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸುತ್ತಿದ್ದು ಇದೀಗ ಬಾಹುಬಲಿ(ಬಾಹುಬಲಿ-2)...
ಬಾಹುಬಲಿ
ಬಾಹುಬಲಿ
ಹೈದರಾಬಾದ್: ದೇಶದಲ್ಲಿ 500-1000 ರುಪಾಯಿ ನೋಟು ಬ್ಯಾನ್ ಆದ ಬೆನ್ನಲ್ಲೇ ಆದಾಯ ತೆರಿಗೆ ಅಧಿಕಾರಿಗಳು ಹಲವು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸುತ್ತಿದ್ದು ಇದೀಗ ಬಾಹುಬಲಿ(ಬಾಹುಬಲಿ-2) ಚಿತ್ರದ ನಿರ್ಮಾಪಕರಾದ ಶೋಭು ಯರ್ಲಗಡ್ಡ ಮತ್ತು ಪ್ರಸಾದ್ ದೇವಿನೇನಿ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. 
ನಿರ್ಮಾಪಕರಾದ ಶೋಭು ಯರ್ಲಗಡ್ಡ ಮತ್ತು ಪ್ರಸಾದ್ ದೇವಿನೇನಿ ಕಚೇರಿಯಲ್ಲಿ ಸುಮಾರು 50 ಕೋಟಿ ಹಣ ಪತ್ತೆಯಾಗಿದೆ.
2015ರಲ್ಲಿ ತೆರೆಕಂಡಿದ್ದ ಬಾಹುಬಲಿ ದಿ ಬಿಗಿನಿಂಗ್ ಚಿತ್ರವನ್ನು 150 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಚಿತ್ರ 650 ಕೋಟಿ ಗಳಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಮಾಡಿತ್ತು. 
ಇದೀಗ ಬಾಹುಬಲಿ-2 ಚಿತ್ರ ನಿರ್ಮಾಣ ಮಾಡಲಾಗುತ್ತಿದ್ದು ಈ ಚಿತ್ರದ ಚಿತ್ರೀಕರಣಕ್ಕೆ ನಿರ್ಮಾಪಕರು 200 ಕೋಟಿ ವೆಚ್ಚ ಮಾಡುತ್ತಿದ್ದು ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವಾಗಿರುವ ಬಾಹುಬಲಿ-2 ಚಿತ್ರ ಬಿಡುಗಡೆಗೂ ಮುನ್ನ ಮ್ಯೂಸಿಕ್, ಟಿವಿ, ಥಿಯೇಟರ್ ರೈಟ್ಸ್ ಸೇರಿದಂತೆ ಸುಮಾರು 350 ಕೋಟಿ ಯಿಂದ 400 ಕೋಟಿವರೆಗೂ ಆದಾಯ ಮಾಡಿದೆ ಎಂಬ ಮಾತುಗಳು ಟಾಲಿವುಡ್ ನಲ್ಲಿ ಹರಿದಾಡುತ್ತಿರುವುದರಿಂದ ಆದಾಯ ತೆರಿಗೆ ಅಧಿಕಾರಿಗಳು ನಿರ್ಮಾಪಕರ ಮನೆ ಮೇಲೆ ದಾಳಿ ಮಾಡಿದ್ದಾರೆ. ಇಲ್ಲಿಯವರೆಗೂ ಆದಾಯ ತೆರಿಗೆ ಅಧಿಕಾರಿಗಳ ಬೃಹತ್ ಮಟ್ಟದ ದಾಳಿ ಇದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com