'ದಂಗಲ್' ಪ್ರಚಾರಕ್ಕೆ ಬಿಗ್ ಬಾಸ್ ಗೆ ಹೋಗಲೊಲ್ಲೆ ಎಂದ ಅಮೀರ್ ಖಾನ್
ತಮ್ಮ ಮುಂದಿನ ಚಿತ್ರ 'ದಂಗಲ್' ಪ್ರಚಾರಕ್ಕಾಗಿ, ಗೆಳೆಯ ಮತ್ತು ಸಹನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ನಟ ಅಮೀರ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಮುಂಬೈ: ತಮ್ಮ ಮುಂದಿನ ಚಿತ್ರ 'ದಂಗಲ್' ಪ್ರಚಾರಕ್ಕಾಗಿ, ಗೆಳೆಯ ಮತ್ತು ಸಹನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ನಟ ಅಮೀರ್ ಖಾನ್ ಸ್ಪಷ್ಟಪಡಿಸಿದ್ದಾರೆ.
"ನಾನು ಸಿನೆಮಾ ಪ್ರಚಾರಕ್ಕಾಗಿ ಟಿವಿ ಮೊರೆ ಹೋಗುವುದಿಲ್ಲ. ಸಿನೆಮಾದ ಟ್ರೇಲರ್ ಮತ್ತು ಪ್ರಮೋ ಗಳನ್ನೂ ನಾವು ಬಿಡುಗಡೆ ಮಾಡಿದ್ದೇವೆ" ಎಂದು ಪ್ರಚಾರಕ್ಕಾಗಿ ಸಲ್ಮಾನ್ ನಡೆಸಿಕೊಡುವ ಬಿಗ್ ಬಾಸ್ ಗೆ ತೆರಳಲಿದ್ದೀರಾ ಎಂಬ ಪ್ರಶ್ನೆಗೆ ಅಮೀರ್ ಉತ್ತರಿಸಿದ್ದಾರೆ.
"ಅವರಿಗೆ ನನ್ನ ಸಿನೆಮಾ ಪ್ರಚಾರ ಮಾಡುವುದಕ್ಕೆ ತೀವ್ರ ಆಸಕ್ತಿ ಇದೆ ಎಂಬುದರ ಬಗ್ಗೆ ನನಗೆ ಖಾತ್ರಿ ಇದೆ. ನನಗೆ ಕೂಡ ಅವರ ಸಿನೆಮಾವನ್ನು ಪ್ರಚಾರ ಮಾಡಲು ಇಷ್ಟ. ನಾವು ಅವರಿಗೆ 'ದಂಗಲ್' ತೋರಿಸಲು ಉತ್ಸಾಹದಿಂದ ಕಾಯುತ್ತಿದ್ದೇನೆ" ಎಂದು ಅಮೀರ್ ಹೇಳಿದ್ದಾರೆ.
ಈ ಹಿಂದೆ 'ಸುಲ್ತಾನ್' ಸಿನೆಮಾದಲ್ಲಿ ಸಲ್ಮಾನ್ ಖಾನ್ ಕುಸ್ತಿಪಟು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಈಗ ಅಮೀರ್ 'ದಂಗಲ್'ನಲ್ಲಿ ಕುಸ್ತಿಪಟುವಾಗಿ ನಟಿಸಿದ್ದಾರೆ.
'ದಬಾಂಗ್' ನಟನ ಜೊತೆಗೆ ಕುಸ್ತಿಯ ಬಗ್ಗೆ ಏನನ್ನಾದರೂ ಚರ್ಚಿಸಿದಿರೇ ಎಂಬ ಪ್ರಶ್ನೆಗೆ "ಇಲ್ಲ ನಾವು ಚರ್ಚಿಸಲಿಲ್ಲ. ಕೃಪಾ ಶಂಕರ್ ಸಿಂಗ್ ನಮಗೆ ತರಬೇತಿ ನೀಡಿದರು ಮತ್ತು ನಮ್ಮ ಸಿನೆಮಾಗೆ ಅಪಾರ ಕಾಣಿಕೆ ನೀಡಿದ್ದಾರೆ" ಎಂದಿದ್ದಾರೆ ಅಮೀರ್.