ಯೂಟ್ಯೂಬ್ ನಲ್ಲಿ 7 ಮಿಲಿಯನ್ ಗೂ ಹೆಚ್ಚು ಮಂದಿಯಿಂದ ಹಿಂದಿ ಆವೃತ್ತಿಯ ಐರಾವತ ಸಿನಿಮಾ ವೀಕ್ಷಣೆ!

ಹಿಂದಿ ಆವೃತ್ತಿಯ ಮಿ. ಐರಾವತ ಸಿನಿಮಾ ಜನಪ್ರಿಯತೆ ಗಳಿಸಿದ್ದು, ಈ ವರೆಗೂ ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಬರೋಬ್ಬರಿ 7.1 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಐರಾವತ
ಐರಾವತ
Updated on

ಹಿಂದಿ ಆವೃತ್ತಿಯ ಮಿ. ಐರಾವತ ಸಿನಿಮಾ ಜನಪ್ರಿಯತೆ ಗಳಿಸಿದ್ದು, ಈ ವರೆಗೂ ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಬರೋಬ್ಬರಿ 7.1 ಮಿಲಿಯನ್ ಜನರು ವೀಕ್ಷಿಸಿದ್ದಾರೆ.

ಬಾಹುಬಲಿ ನಂತರ ಹಿಂದಿ ಆವೃತ್ತಿಯ ಮಿ. ಐರಾವತ ಸಿನಿಮಾವನ್ನು ದಾಖಲೆಯ ಪ್ರಮಾಣದಲ್ಲಿ ವೀಕ್ಷಿಸಲಾಗಿದೆ. 2015 ರ ಅಕ್ಟೊಬರ್ ನಲ್ಲಿ ಬಿಡುಗಡೆಯಾಗಿದ್ದ ಸಿನಿಮಾದ ಹಕ್ಕುಗಳು ದಾಖಲೆಯ ಬೆಲೆಗೆ ಹಿಂದಿ ಭಾಷೆಗೆ  ಡಬ್ ಮಾಡಲು ಮಾರಾಟವಾಗಿತ್ತು.

ಹಿಂದಿ ವೀಕ್ಷಕರು ಹೆಚ್ಚಿನ ಪ್ರಮಾಣದಲ್ಲಿ ಚಿತ್ರ ವೀಕ್ಷಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿತ್ರದ ನಿರ್ದೇಶಕ ಅರ್ಜುನ್, ಹಿಂದಿಗೆ ಡಬ್ ಆಗಿರುವ ಕನ್ನಡ ಚಿತ್ರವೊಂದನ್ನು ಅತಿ ಹೆಚ್ಚು ವೀಕ್ಷಿಸಲಾಗಿರುವುದು ಇದೆ ಮೊದಲು ಎಂದು ಹೇಳಿದ್ದಾರೆ.

ಬಾಬುಬಲಿಯ ಹಿಂದಿ ಆವೃತ್ತಿಯ ಸಿನಿಮಾವನ್ನು 13 ಮಿಲಿಯನ್ ಜನರು ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದಾರೆ. ಇದಾದ ನಂತರ ಅತಿ ಹೆಚ್ಚು ವೀಕ್ಷಿಸಲ್ಪಟ್ಟಿರುವ ಸಿನಿಮಾ ಹಿಂದಿ ಆವೃತ್ತಿಯ ಐರಾವತ. ಐರಾವತದ ನಂತರದ ಸ್ಥಾನದಲ್ಲಿ ಯಶ್ ನಟನೆಯ ಮಾಸ್ಟರ್ ಪೀಸ್, ಸುದೀಪ್ ನಟನೆಯ ರನ್ನ ಚಿತ್ರಗಳನ್ನು ಅನುಕ್ರಮವಾಗಿ 3, 2 ಮಿಲಿಯನ್ ಜನರು ವೀಕ್ಷಿಸಿದ್ದಾರೆ.

ಇನ್ನು ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾ ಮುಹೂರ್ತ ಇಂದು(ಅ.6) ರಂದು ನಡೆದಿದ್ದು, ಅಕ್ಟೊಬರ್ ಮಧ್ಯದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com