ಹಾಗೆಯೇ ಈ ಜಾಗದ ಹಣವನ್ನು ನೀಡಲು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ (ಕೆಸಿಎ) ಐದು ವರ್ಷಗಳ ಸಮಯವನ್ನು ಕೂಡ ಸಂಪುಟ ನೀಡಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಗೆ 30 ವರ್ಷಗಳ ಭೋಗ್ಯಕ್ಕೆ ಈ ಜಾಗ ನೀಡಲಾಗುವುದು ಮತ್ತು ಖಾಸಗಿ ರಂಗದ ಸಹಕಾರದೊಂದಿಗೆ ಕೆಸಿಎ ಈ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಕಾನೂನು ಸಚಿವ ಟಿಬಿ ಜಯಚಂದ್ರ ಹೇಳಿದ್ದಾರೆ.