'ನಾಗರಹಾವು' ಸಿನೆಮಾದ ನಿರ್ಮಾಪಕರು ದಿವಂಗತ ನಟ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ 18 ರಂದು ನೂತನ ಸಿನೆಮಾದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಆಚರಿಸುತ್ತಿದ್ದು, ಅಂದು
ಬೆಂಗಳೂರು: 'ನಾಗರಹಾವು' ಸಿನೆಮಾದ ನಿರ್ಮಾಪಕರು ದಿವಂಗತ ನಟ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ 18 ರಂದು ನೂತನ ಸಿನೆಮಾದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಆಚರಿಸುತ್ತಿದ್ದು, ಅಂದು ಒಂದು ಟನ್ ತೂಕದ ಕೇಕ್ ಕತ್ತರಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
"ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಅದ್ದೂರಿ ಕಾರ್ಯಕ್ರಮ. ಇದನ್ನು ಅವರ ಅಭಿಮಾನಿಗಳೊಂದಿಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಚರಿಸಲಿದ್ದೇವೆ. ಸದ್ಯಕ್ಕೆ ಕೇಕ್ ತಯಾರಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಅದು ಮುಗಿದ ನಂತರ ಹುಟ್ಟುಹಬ್ಬದ ದಿನ ಅದನ್ನು ಮೈದಾನಕ್ಕೆ ಕೊಂಡೊಯ್ಯಲಿದ್ದೇವೆ ಮತ್ತು ಭಾಗಿಯಾಗುವ ವಿಷ್ಣು ಅಭಿಮಾನಿಗಳಿಗೆ ಕೇಕ್ ಹಂಚಲಿದ್ದೇವೆ" ಎಂದು ಚಿತ್ರದ ಸಹ ನಿರ್ದೇಶಕ ಯೋಗೇಶ್ ಹೇಳಿದ್ದಾರೆ.
ದಿಗಂತ್ ಮತ್ತು ರಮ್ಯ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನೆಮಾದಲ್ಲಿ, ದರ್ಶನ್ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದು, ವಿಷ್ಣುವರ್ಧನ್ ಅವರಿಗೆ ಗೌರವ ಸಮರ್ಪಿಸಲಿದ್ದಾರೆ.
ಇತ್ತೀಚಿಗೆ ಕಾವೇರಿ ಹೋರಾಟದ ಗಲಭೆಗಳಲ್ಲಿ ಅಸು ನೀಗಿದ ಉಮೇಶ್ ಕುಟುಂಬಕ್ಕೆ 'ನಾಗರಹಾವು' ಚಿತ್ರದ ನಿರ್ಮಾಪಕ ಸಾಜಿದ್ ಖುರೇಷಿ 2 ಲಕ್ಷ ರೂ ನೀಡಿ ಮಾನವೀಯತೆ ಮೆರೆದಿದ್ದರು. ಹಾಗೆಯೇ ಗಾಯಗೊಂಡ ಚಂದ್ರಮೋಹನ್ ಅವರಿಗೆ 50 ಸಾವಿರ ರೂ ನೀಡಿದ್ದರು.