ಅಭಿಮಾನಿಗಳ ಜೊತೆಗಿನ ಭೇಟಿ ರದ್ದು ಪಡಿಸಿದ ರಜನೀಕಾಂತ್

ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ಅಭಿಮಾನಿಗಳ ಜೊತೆಗಿನ ಭೇಟಿಯನ್ನು ರದ್ಧುಪಡಿಸಿದ್ದಾರೆ...
ರಜನೀಕಾಂತ್
ರಜನೀಕಾಂತ್
Updated on: 
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ಅಭಿಮಾನಿಗಳ ಜೊತೆಗಿನ  ಭೇಟಿಯನ್ನು ರದ್ಧುಪಡಿಸಿದ್ದಾರೆ. 
ಏಪ್ರಿಲ್ 12 ರಿಂದ 5 ದಿನಗಳ ಕಾಲ ಅಭಿಮಾನಿಗಳ ಭೇಟಿಗೆ ಸಮಯ ನಿಗದಿ ಪಡಿಸಲಾಗಿತ್ತು. ಆದರೆ ಪ್ರತಿದಿನ 2 ಸಾವಿರ ಅಭಿಮಾನಿಗಳ ಜೊತೆಗೆ ಫೋಟೋಗೆ ಫೋಸ್ ಕೊಡುವುದು ಕಷ್ಟದ ಕೆಲಸ ಹೀಗಾಗಿ ಭೇಟಿಯನ್ನು ರದ್ಧುಗೊಳಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಆದರೆ ಅಭಿಮಾನಿಗಳು ಇರುವ ಊರಿನ ಜಿಲ್ಲೆಯಲ್ಲಿ ಅವರನ್ನು ಭೇಟಿ ಮಾಡಿ ಅಲ್ಲಿಯೇ ಪ್ರತ್ಯೇಕವಾಗಿ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳುವುದಾಗಿ ಹೇಳಿದ್ದಾರೆ.
ದಶಕದ ನಂತರ ರಜನೀಕಾಂತ್ ಅಭಿಮಾನಿಗಳ ಭೇಟಿಗೆ ನಿರ್ಧರಿಸಿದ್ದರು. ಚೆನ್ನೈನ ಶ್ರೀ ರಾಘವೇಂದ್ರ ಮ್ಯಾರೇಜ್ ಹಾಲ್ ನಲ್ಲ 3 ರಿಂದ 4 ಜಿಲ್ಲೆಗಳ ಅಭಿಮಾನಿಗಳನ್ನು ಭೇಟಿ ಮಾಡಿ ಅವರಜೊತೆ ಮಾತುಕತೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ವಾಸ್ತವವಾಗಿ ಪ್ರತಿಯೊಬ್ಬ ಅಭಿಮಾನಿ ಜೊತೆ ವಯಕ್ತಿಕವಾಗಿ ಫೋಟೋ ತೆಗೆಸಿಕೊಳ್ಳುವುದು ಕಷ್ಟದ ವಿಷಯವಾದ್ದರಿಂದ ಭೇಟಿಯನ್ನು ರದ್ಧುಗೊಳಿಸಲಾಗಿದೆ. 
ಜಿಲ್ಲೆಗಳಲ್ಲಿ ಅಭಮಾನಿಗಳನ್ನು ಭೇಟಿ ಮಾಡುವ ದಿನಾಂಕವನ್ನು ಪ್ರಕಟಿಸುವುದಾಗಿ ರಜನೀಕಾಂತ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com