ರಜನಿಕಾಂತ್ ರ 2.0 ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಸಿನಿಮಾ 2.0 ದ ಬಿಡುಗಡೆಯ ದಿನಾಂಕ ಮುಂದೂಡಲ್ಪಟ್ಟಿದ್ದು 2018 ರ ಜ.25 ಕ್ಕೆ ಬಿಡುಗಡೆಯಾಗಲಿದೆ.
ರಜನಿಕಾಂತ್
ರಜನಿಕಾಂತ್
Updated on: 
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಸಿನಿಮಾ 2.0 ದ ಬಿಡುಗಡೆಯ ದಿನಾಂಕ ಮುಂದೂಡಲ್ಪಟ್ಟಿದ್ದು 2018 ರ ಜ.25 ಕ್ಕೆ ಬಿಡುಗಡೆಯಾಗಲಿದೆ. 
ಈ ವರ್ಷದ ದೀಪಾವಳಿಯ ದಿನದಂದು 2.0 ಚಿತ್ರವನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ವಿಶ್ವದರ್ಜೆಯ ವಿಎಫ್ಎಕ್ಸ್ ಗಾಗಿ ಕೆಲಸ ಮಾಡುತ್ತಿರುವುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಅಮೆರಿಕಾದಲ್ಲಿ ವಿಶ್ಯುಯಲ್ ಎಫೆಕ್ಟ್ ಹೊಂದಿರುವ ಭಾಗದ ಕೆಲಸ ನಡೆಯುತ್ತಿದ್ದು ಚಿತ್ರತಂಡ ಕಾರ್ಯನಿರತವಾಗಿದೆ ಈ ಹಿನ್ನೆಲೆಯಲ್ಲಿ 2018 ರ ಜ.25 ಕ್ಕೆ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದೇವೆ ಎಂದು ಲಿಕಾ ಪ್ರೊಡಕ್ಷನ್ಸ್ ನ ರಾಜು ಮಹಾಲಿಂಗಂ ಹೇಳಿದ್ದಾರೆ. 
2.0 ಚಿತ್ರ 2010 ರಲ್ಲಿ ಬಿಡುಗಡೆಯಾದ ಎಂಥಿರನ್-2 ಸೀಕ್ವೆಲ್ ಚಿತ್ರವಾಗಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ನಟಿಸಿದ್ದಾರೆ. ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, 450 ಕೋಟಿ ಬಜೆಟ್ ನ ಚಿತ್ರವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com