ಭಾರತೀಯ ಚಿತ್ರರಂಗದ ದಾಖಲೆಗಳು ಧೂಳಿಪಟ: ಬಾಹುಬಲಿ 2 ಮೊದಲ ದಿನ 125 ಕೋಟಿ ಕಲೆಕ್ಷನ್!

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಬಾಹುಬಲಿ 2 ಚಿತ್ರ ನಿನ್ನೆ ತೆರೆಗೆ ಬಂದಿದ್ದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಬಾಹುಬಲಿ 2 ಮೊದಲ ದಿನ ಕಲೆಕ್ಷನ್ 125 ಕೋಟಿ ರುಪಾಯಿ...
ಬಾಹುಬಲಿ-2
ಬಾಹುಬಲಿ-2
ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಬಾಹುಬಲಿ 2 ಚಿತ್ರ ನಿನ್ನೆ ತೆರೆಗೆ ಬಂದಿದ್ದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಬಾಹುಬಲಿ 2 ಮೊದಲ ದಿನ ಕಲೆಕ್ಷನ್ 125 ಕೋಟಿ ರುಪಾಯಿ ಎಂದು ಹೇಳಲಾಗಿದೆ. 
ಭಾರತದಾದ್ಯಂತ 6500 ಸ್ಕ್ರೀನ್ ಗಳ ಮೇಲೆ ರಾರಾಜಿಸುತ್ತಿರುವ ಬಾಹುಬಲಿ 2 ಚಿತ್ರ ಭಾರತೀಯ ಚಿತ್ರರಂಗದ ಈ ಹಿಂದಿನ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿ ಮುನ್ನುಗ್ಗುತ್ತಿದೆ. 
ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಬಾಹುಬಲಿ ಆಂಧ್ರ ಮತ್ತು ತೆಲಂಗಾಣದಲ್ಲಿ 55 ಕೋಟಿ, ಹಿಂದಿಯಲ್ಲಿ 38 ಕೋಟಿ, ಕರ್ನಾಟಕದಲ್ಲಿ 12 ಕೋಟಿ, ಕೇರಳ 9 ಕೋಟಿ ಮತ್ತು ತಮಿಳುನಾಡಿನಲ್ಲಿ 11 ಕೋಟಿ ಗಳಿಸಿದ್ದು ಒಟ್ಟಾರೆ ಮೊದಲ ದಿನವೇ 125 ಕೋಟಿ ಗಳಿಕೆ ಮಾಡಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com