ಭಾರತದಲ್ಲಿ ಬಾಹುಬಲಿ 2 ಆರ್ಭಟ: ಮೂರನೇ ದಿನಕ್ಕೆ 383 ಕೋಟಿ ಗಳಿಕೆ!

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಬಾಹುಬಲಿ 2 ಚಿತ್ರ ಭಾರತದಾದ್ಯಂತ ಭರ್ಜರಿ ಪ್ರದರ್ಶನದ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು ಇತಿಹಾಸ ನಿರ್ಮಿಸಿದೆ...
ಬಾಹುಬಲಿ-2
ಬಾಹುಬಲಿ-2
Updated on: 
ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಬಾಹುಬಲಿ 2 ಚಿತ್ರ ಭಾರತದಾದ್ಯಂತ ಭರ್ಜರಿ ಪ್ರದರ್ಶನದ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು ಇತಿಹಾಸ ನಿರ್ಮಿಸಿದೆ. 
ನಿರ್ದೇಶಕ ಎಸ್ಎಸ್ ರಾಜಮೌಳಿ ಕನಸಿನ ಕೂಸು ಬಾಹುಬಲಿ 2 ಮೊದಲ ದಿನ 120 ಕೋಟಿ ರುಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನವೂ ಬಾಕ್ಸ್ ಆಫೀಸ್ ನಲ್ಲಿ ಮಿಂಚು ಹರಿಸಿದ ಬಾಹುಬಲಿ 2 116 ಕೋಟಿ ಕಲೆಕ್ಷನ್ ಮಾಡಿದೆ. ಮೂರನೇ ದಿನ ಭಾನುವಾರ ಬಾಹುಬಲಿ ಅಬ್ಬರ ಇನ್ನು ಕೊಂಚ ಜೋರಾಗಿದ್ದು 147 ಕೋಟಿ ರುಪಾಯಿ ಕಲೆಕ್ಷನ್ ಮಾಡಿದ್ದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲೊಂದು ಸೃಷ್ಟಿ ಮಾಡಿದೆ. 
ಭಾರತದಾದ್ಯಂತ 6500 ಸ್ಕ್ರೀನ್ ಗಳ ಮೇಲೆ ಬಾಹುಬಲಿ 2 ರಾರಾಜಿಸುತ್ತಿದೆ. ಬಿಡುಗಡೆಯಾಗಿರುವ ಎಲ್ಲಾ ಕಡೆ ಶೇಖಡ 95ರಷ್ಟು ಚಿತ್ರಮಂದಿರಗಳು ಭರ್ತಿಯಾಗುತ್ತಿದ್ದು ಬಾಕ್ಸ್ ಆಫೀಕ್ ಕಲೆಕ್ಷನ್ ನಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com