ದಿ ವಿಲ್ಲನ್ ಸಿನಿಮಾ ಸ್ಯಾಟಲೈಟ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟ?

ಸಿನಿಮಾ ಶೂಟಿಂಗ್ ಆರಂಭವಾದಾಗಿನಿಂದ ಸದಾ ಒಂದಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುವ ಪ್ರೇಮ್ ನಿರ್ದೇಶನದ ದಿ ವಿಲ್ಲನ್ ಚಿತ್ರದ ಸ್ಯಾಟಲೈಟ್ ರೈಟ್ಸ್ ...
ವಿಲ್ಲನ್ ಸಿನಿಮಾದಲ್ಲಿ ಸುದೀಪ್ ಮತ್ತು ಶಿವಣ್ಣ
ವಿಲ್ಲನ್ ಸಿನಿಮಾದಲ್ಲಿ ಸುದೀಪ್ ಮತ್ತು ಶಿವಣ್ಣ
ಬೆಂಗಳೂರು: ಸಿನಿಮಾ ಶೂಟಿಂಗ್ ಆರಂಭವಾದಾಗಿನಿಂದ ಸದಾ ಒಂದಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುವ ಪ್ರೇಮ್ ನಿರ್ದೇಶನದ ದಿ ವಿಲ್ಲನ್ ಚಿತ್ರದ ಸ್ಯಾಟಲೈಟ್ ರೈಟ್ಸ್ 7.3 ಕೋಟಿ ರು.ಗೆ ಮಾರಾಟ ವಾಗಿದೆ.
ಶಿವರಾಜ್ ಕುಮಾರ್, ಸುದೀಪ್ ಮತ್ತು ಆ್ಯಮಿ ಜಾಕ್ಸನ್ ಅಭಿನಯದ ಸಿನಿಮಾ ಬಿಡುಗಡೆಗೆ ಮುನ್ನವೇ ಭರ್ಜರಿ ಹಣ ಗಳಿಸಿರುವುದನ್ನು ನಿರ್ದೇಶಕ ಪ್ರೇಮ್ ಟ್ವೀಟ್ ಮಾಡಿದ್ದಾರೆ.
ತೆಲುಗು ಮತ್ತು ತಮಿಳಿಗಿಂತ ವಿಲ್ಲನ್ ದಾಖಲೆಯ ಬೆಲೆಗೆ ಮಾರಾಟವಾಗಿದ್ದು, ಕಲಾವಿದರು ಮತ್ತು ನಿರ್ಮಾಪಕರಿಗೆ ಪ್ರೇಮ್ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಎಷ್ಟು ಹಣಕ್ಕೆ ಮಾರಾಟವಾಗಿದೆ ಎಂಬುದನ್ನು ಪ್ರೇಮ್ ಬಹಿರಂಗ ಪಡಿಸಿಲ್ಲ, ಸಿನಿಮಾ ಮೂಲಗಳು ಇದನ್ನು ಸ್ಪಷ್ಟಪಡಿಸಿವೆ. ಜೀ ಕನ್ನಡ ವಾಹಿನಿ ಸಿನಿಮಾದ ಸ್ಯಾಟ್ ಲೈಟ್ ಹಕ್ಕನ್ನು ಖರೀದಿಸಿದೆ. ಹಿಂದಿ ರೈಟ್ಸ್ ಗಾಗಿ 5.4 ಕೋಟಿ ರು ಪಡೆದುಕೊಂಡಿದೆ.
ಲಂಡನ್ ಶೂಟಿಂಗ್ ಮುಗಿಸಿ ವಾಪಸ್ ಬಂದಿರವ ನಿರ್ದೇಶಕ ಪ್ರೇಮ್ ಸದ್ಯ ಸುದೀಪ್ ಅಭಿನಯದ ಮೊದಲ ಹಾಡಿನ ಶೂಟಿಂಗ್ ಗಾಗಿ ಮುಂಬಯಿಯಲ್ಲಿ ಲೋಕೇಶನ್ ಹುಡುಕಾಟದಲ್ಲಿದ್ದಾರೆ.
ಸಿ.ಆರ್ ಮನೋಹರ್ ಸಿನಿಮಾ ನಿರ್ಮಾಣ ಮಾಡಿದ್ದು, ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ತೆಲುಗು ನಟ, ಶ್ರೀಕಾಂತ್, ಮತ್ತು ಶೃತಿ ಹರಿಹರನ್ ಸೇರಿದಂತೆ ಹಲವರು ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com