ಪ್ರಭಾಸ್ 'ಸಾಹೊ'ಗೆ ಶ್ರದ್ಧಾ ಕಪೂರ್ ನಾಯಕಿ

ಬಾಹುಬಲಿ ನಟ ಪ್ರಭಾಸ್ ಅಭಿನಯಿಸುತ್ತಿರುವ ಬಹುಭಾಷೆಗಳಲ್ಲಿ ತೆರೆಕಾಣುತ್ತಿರುವ ಚಿತ್ರ ಸಾಹೊಗೆ...
ಶ್ರದ್ಧಾ ಕಪೂರ್
ಶ್ರದ್ಧಾ ಕಪೂರ್
ಬಾಹುಬಲಿ ನಟ ಪ್ರಭಾಸ್ ಅಭಿನಯಿಸುತ್ತಿರುವ ಬಹುಭಾಷೆಗಳಲ್ಲಿ ತೆರೆಕಾಣುತ್ತಿರುವ ಚಿತ್ರ ಸಾಹೊಗೆ ನಾಯಕಿಯಾಗಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದಾರೆ. ಅನುಷ್ಕಾ ಶೆಟ್ಟಿ ಈ ಬಾರಿ ಕೂಡ ಪ್ರಭಾಸ್ ಗೆ ನಾಯಕಿಯಾಗಿ ನಟಿಸಬಹುದೆಂಬ ಕುತೂಹಲವಿತ್ತು. 
ಚಿತ್ರ ನಿರ್ಮಾಣ ಸಂಸ್ಥೆಯಾದ ಯುವಿ ಕ್ರಿಯೇಷನ್ಸ್ ಶ್ರದ್ಧಾ ಆಯ್ಕೆಯನ್ನು ಟ್ವಿಟ್ಟರ್ ನಲ್ಲಿ ದೃಢಪಡಿಸಿದೆ. 
ಸಾಹೊ ಹಿಂದಿ ಭಾಷೆಯಲ್ಲಿ ಪ್ರಭಾಸ್ ಅವರ ಮೊದಲ ಚಿತ್ರವಾಗಿದೆ. ಚಿತ್ರದಲ್ಲಿ ಆಕ್ಷನ್, ಸ್ಟಂಟ್ ದೃಶ್ಯಗಳಿಗೆ ಕೆನ್ನಿ ಬೇಟ್ಸ್ ಕೊರಿಯೊಗ್ರಫಿ ಮಾಡಲಿದ್ದಾರೆ. ಹೈಟೆಕ್ ಆಕ್ಷನ್ ಡ್ರಾಮಾವಾದ ಸಾಹೊ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಲಿದೆ.
ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಾಹೊ ಚಿತ್ರಕ್ಕೆ ಸೆಟ್ ತಯಾರಾಗಿದೆ.ಶಂಕರ್ ಎಹ್ಸಾನ್ ಲೊಯ್ ತಂಡ ಚಿತ್ರಕ್ಕೆ ಸಂಗೀತ ನೀಡಲಿದೆ. ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ಸಾಹೊಗೆ ಎದುರಾಳಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ತೆಲುಗು ಚಿತ್ರ ನಿರ್ದೇಶಕ ಸುಜೀತ್ ರೆಡ್ಡಿ ಚಿತ್ರಕ್ಕೆ ಆಕ್ಷನ್, ಕಟ್ ಹೇಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com