ಅಮೆರಿಕಾದ ನಿಯತಕಾಲಿಕೆ ಫೋರ್ಬ್ಸ್ ಮ್ಯಾಗಜಿನ್ ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಈ ಮೂವರು ನಟರು ಸ್ಥಾನ ಗಳಿಸಿದ್ದಾರೆ. 244 ಕೋಟಿ ರೂಪಾಯಿ ಆದಾಯ ಪಡೆಯುವ ಶಾರೂಕ್ ಖಾನ್ 8ನೇ ಸ್ಥಾನ, 237 ಕೋಟಿ ರೂಪಾಯಿ ಆದಾಯದೊಂದಿಗೆ ನಟ ಸಲ್ಮಾನ್ ಖಾನ್ 9ನೇ ಸ್ಥಾನ ಹಾಗೂ 227 ಕೋಟಿ ರೂ. ಆದಾಯದೊಂದಿಗೆ ಅಕ್ಷಯ್ ಕುಮಾರ್ 10ನೇ ಸ್ಥಾನ ಗಳಿಸಿದ್ದಾರೆ.