ಚೆನ್ನೈ: ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ '2.0' ಚಿತ್ರದ ಮೇಕಿಂಗ್ ವಿಡಿಯೋವನ್ನು ನಿರ್ದೇಶಕ ಶಂಕರ್ ತಮ್ಮ ಅಧಿಕೃತ ಟ್ವಟರ್ ಖಾತೆಯಲ್ಲಿ ಭಿಡುಗಡೆ ಮಾಡಿದ್ದಾರೆ. .1 ನಿಮಿಷ 47 ಸೆಕೆಂಡುಗಳ ಈ ವೀಡಿಯೋ ರಜನಿಕಾಂತ್ ಅಭಿಮಾನಿಗಳು ಸೇರಿ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ..2010 ರಲ್ಲಿ ತೆರೆಕಂಡ 'ಎಂದಿರನ್' ಚಿತ್ರದ ಮುಂದುವರಿದ ಭಾಗ ಇದಾಗಿದ್ದು ರಜನಿಕಾಂತ್, ಅಕ್ಷಯ್ ಕುಮಾರ್, ಆ್ಯಮ್ಮಿ ಜಾಕ್ಸನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. .ಈ ಚಿತ್ರಕ್ಕೆ ಭಾರತದ ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ..ಈ ಚಿತ್ರವು ಮುಂದಿನ ವರ್ಷ ಜನವರಿ 25 ರಂದು ಬಿಡುಗಡೆಯಾಗುವ ನಿರೀಕ್ಷೆಯಿದ್ದು ನಿರ್ಮಾಪಕರು ಈಗಾಗಲೆ ಅಮೇರಿಕಾದಲ್ಲಿ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics