ವದಂತಿಗಳಿಗೆ ಕೊನೆಹಾಡಲು ನನ್ನ ರಾಜಕೀಯ ಪ್ರವೇಶವನ್ನುಆತುರದಿಂದ ತಿಳಿಸಬೇಕಾಯಿತು: ಉಪೇಂದ್ರ

ಸ್ಯಾಂಡಲ್ವುಡ್ ನ ಬುದ್ಧಿವಂತ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ಚಿತ್ರಗಳು ಯಾವಾಗಲೂ ಕುತೂಹಲ ಕೆರಳಿಸುತ್ತವೆ. ಇನ್ನು ಉತ್ತಮ ಪ್ರಜಾ ಪಾರ್ಟಿಯೊಂದಿಗೆ...
ಉಪೇಂದ್ರ
ಉಪೇಂದ್ರ
Updated on: 
ಬೆಂಗಳೂರು: ಸ್ಯಾಂಡಲ್ವುಡ್ ನ ಬುದ್ಧಿವಂತ ನಿರ್ದೇಶಕ ಎಂದೇ ಖ್ಯಾತಿ ಗಳಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಚಿತ್ರಗಳಂತೆ ಅವರು ರಾಜಕೀಯ ಎಂಟ್ರಿ ಸಹ ಕುತೂಹಲ ಕೆರಳಿದೆ. ಇತ್ತೀಚೆಗಷ್ಟೇ ಉತ್ತಮ ಪ್ರಜಾ ಪಾರ್ಟಿಯನ್ನು ಘೋಷಿಸುವ ಮೂಲಕ ರಾಜಕೀಯಕ್ಕೂ ಎಂಟ್ರಿಕೊಟ್ಟಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಉಪೇಂದ್ರ ಅವರು ಪಾರ್ಟಿ ತೆಗೆಯುವುದು ಯೋಜಿತವಾಗಿರಲಿಲ್ಲ. ಒಂದು ಚಿತ್ರದ ಬಳಿಕ ಆ ಬಗ್ಗೆ ಯೋಜಿಸುತ್ತಿದ್ದೆ ಅಷ್ಟರಲ್ಲೇ ನಾನು ಬಿಜೆಪಿ ಸೇರುತ್ತಿದ್ದೇನೆ ಎಂಬ ವದಂತಿಗಳು ಹರಿದಾಡಲಾರಂಭಿಸಿದ್ದವು ಎಂದು ಹೇಳಿದ್ದಾರೆ. 
ನಾನು ಬಿಜೆಪಿ ಸೇರುತ್ತಿದ್ದೇನೆ ಎಂಬ ವದಂತಿಗಳು ಹರಿದಾಡುತ್ತಿದ್ದಂತೆ ಬೆಕ್ಕಿಗೆ ಗಂಟೆ ಕಟ್ಟಿರುವುದನ್ನು ಮನಗಂಡ ಮಾನ ಕೂಡಲೇ ಎಚ್ಚರಿಕೆಯಿಂದ ಯೋಜನೆಯನ್ನು ರೂಪಿಸಿದೆ ಎಂದು ಹೇಳಿದ್ದಾರೆ. ಇನ್ನು ಯಾವುದಾದರೂ ಪಕ್ಷವನ್ನು ಬೆಂಬಲಿಸುತ್ತೀರಾ? ಎಂದು ಕೇಳಿದಕ್ಕೆ ಉಪೇಂದ್ರ ಅವರು, ನಾನು ಅಂದುಕೊಂಡಂತೆ ಅಭ್ಯರ್ಥಿಗಳು ಕಣದಲ್ಲಿದ್ದರೇ ಅಂತಹವರನ್ನು ನಾನು ಬೆಂಬಲಿಸುತ್ತೇನೆ. ನನಗೆ ಜಾತಿ, ಹಣ ಬೆಂಬಲ ಹೊಂದಿರುವವರು ಬೇಡ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. 
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿದಾಗ, ಆ ಮನುಷ್ಯ ನಿಜಕ್ಕೂ ಅದ್ಭುತ. ಅವರ ಕೈಯಲ್ಲಿ ಏನು ಆಗುತ್ತದೆಯೋ ಅದನ್ನು ಅವರು ಮಾಡಿ ತೋರಿಸುತ್ತಾರೆ ಎಂದು ನಾನು ನಂಬುತ್ತೇನೆ. ಇನ್ನು ಅವರ ಪಕ್ಷ ಸೇರುವ ಕುರಿತಂತೆ ಏನು ನಿರ್ಧಾರ ಮಾಡಿಲ್ಲ. ಇಂದು ರಾಜಕೀಯ ವ್ಯವಹಾರವಾಗಿ ಬದಲಾಗಿದ್ದು ಇದನ್ನು ಬಿಟ್ಟು ನನಗೆ ಗೊತ್ತಿಲ್ಲ. ಬಹುಶಃ ಮೊದಲು ಜನರನ್ನು ತಲುಪಲು ನಿಮಗೆ ಹಣ ಬೇಕಾಗಿತ್ತು. ಆದರೆ ಇದೀಗ ತಂತ್ರಜ್ಞಾನದಿಂದ ಸುಲಭವಾಗಿ ಜನರನ್ನು ತಲುಪಬಹುದಾಗಿದೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com