ಹಾಥಿ ಮೇರೆ ಸಾಥಿ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡ ರಾಣಾ ದಗ್ಗುಬಾಟಿ

ರಾಣ ದಗ್ಗುಬಾಟಿ ತಮ್ಮ ಮುಂದಿನ ಚಿತ್ರ ಹಾಥಿ ಮೇರೆ ಸಾಥಿ ಚಿತ್ರದ ಫಸ್ಟ್ ಲುಕ್ ನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ.
ರಾಣಾ ದಗ್ಗುಬಾಟಿ
ರಾಣಾ ದಗ್ಗುಬಾಟಿ
ಮುಂಬೈ: ರಾಣ ದಗ್ಗುಬಾಟಿ ತಮ್ಮ ಮುಂದಿನ ಚಿತ್ರ ಹಾಥಿ ಮೇರೆ ಸಾಥಿ ಚಿತ್ರದ ಫಸ್ಟ್ ಲುಕ್ ನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ. 
ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿರುವ ರಾಣ ದಗ್ಗುಬಾಟಿ, ಬನ್ ದೇವ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ 1971 ರಲ್ಲಿ ರಾಜೇಶ್ ಖನ್ನಾ ನಟಿಸಿದ್ದ ಹಾಥಿ ಮೇರೆ ಸಾಥಿ ಚಿತ್ರದ ರೀಮೇಕ್ ಆಗಿದ್ದು, ಫಸ್ಟ್ ಲುಕ್ ನಲ್ಲಿ ರಾಣ ದಗ್ಗುಬಾಟಿ ಆನೆಯ ಸೊಂಡಿಲಿಗೆ ಒರಗಿ ನಿಂತಿರುವ ಫೋಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. 
ಹೊಸ ವರ್ಷಕ್ಕೆ ಅತ್ಯುತ್ತಮ ಕಥೆಯ ಮೂಲಕ ಮನರಂಜನೆ ದೊರೆಯಲಿದೆ, ಹಾಥಿ ಮೇರೆ ಸಾಥಿಯಿಂದ ಬನ್ ದೇವ್ ನ್ನು ಪರಿಚಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ರಾಣ ದಗ್ಗುಬಾಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಹಾಥಿ ಮೇರೆ ಸಾಥಿ ಚಿತ್ರ ಹಿಂದಿ, ತೆಲುಗು, ತಮಿಳು ಭಾಷೆಯಲ್ಲೂ ತೆರೆ ಕಾಣಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com