ಮತ್ತೊಂದು ಸಿನೆಮಾದಲ್ಲಿ ಬಿಗ್ ಬಿ ಮತ್ತು ಮೋಹನ್ ಲಾಲ್ ಒಟ್ಟಿಗೆ ನಟನೆ?

ಸದ್ಯಕ್ಕೆ ದಟ್ಟವಾಗಿ ಹರಡಿರುವ ವದಂತಿಗಳು ನಿಜವಾದರೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಮಲಯಾಳಂ ಸೂಪರ್ಸ್ಟಾರ್ ಮೋಹನ್ ಲಾಲ್ ಅವರು ದೊಡ್ಡ ಬಜೆಟ್ ಚಿತ್ರ 'ಒಡಿಯನ್'
ಮೋಹನ್ ಲಾಲ್ - ಅಮಿತಾಬ್ ಬಚ್ಚನ್
ಮೋಹನ್ ಲಾಲ್ - ಅಮಿತಾಬ್ ಬಚ್ಚನ್
Updated on
ಚೆನ್ನೈ: ಸದ್ಯಕ್ಕೆ ದಟ್ಟವಾಗಿ ಹರಡಿರುವ ವದಂತಿಗಳು ನಿಜವಾದರೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಮಲಯಾಳಂ ಸೂಪರ್ಸ್ಟಾರ್ ಮೋಹನ್ ಲಾಲ್ ಅವರು ದೊಡ್ಡ ಬಜೆಟ್ ಚಿತ್ರ 'ಒಡಿಯನ್' (ತಾತ್ಕಾಲಿಕ ಶೀರ್ಷಿಕೆ) ನಲ್ಲಿ ಒಟ್ಟಿಗೆ ನಟಿಸಲಿದ್ದಾರೆ. ಶ್ರೀಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಮತ್ತು ಮಂಜು ವಾರಿಯರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. 
೬೦೦ ಕೋಟಿ ಬಜೆಟ್ ನಲ್ಲಿ ನಿರ್ಮಾಣಗೊಳ್ಳಲಿದೆ ಎಂದು ತಿಳಿಯಲಾಗಿರುವ ಈ ಸಿನೆಮಾ ೩ಡಿ ತಂತ್ರಜ್ಞಾನದಲ್ಲಿ ಚಿತ್ರೀಕರಣಗೊಳ್ಳಲಿದೆಯಂತೆ. ಎಲ್ಲವು ಪ್ರಾರಂಭಿಕ ಹಂತದಲ್ಲಿರುವುದರಿಂದ ಯಾವುದು ಅಧಿಕೃತವಾಗಿ ಘೋಷಣೆಯಾಗಿಲ್ಲ. 
ಈ ಯೋಜನೆ ಘನೀಕೃತವಾದರೆ, ಬಿಗ್ ಬಿ ಮತ್ತು ಮೋಹನ್ ಲಾಲ್ ಮೂರನೇ ಬಾರಿಗೆ ಒಟ್ಟಾಗಲಿದ್ದಾರೆ, ಈ ಹಿಂದೆ 'ಕಂಧಹಾರ್' ಮತ್ತು ರಾಮ್ ಗೋಪಾಲ್ ವರ್ಮಾಕಿ ಆಗ್ ನಲ್ಲಿ ಒಟ್ಟಿಗೆ ನಟಿಸಿದ್ದರು. 
ಈಮಧ್ಯೆ ಮೋಹನ್ ಲಾಲ್ ತಮ್ಮ ಮುಂದಿನ ಸಿನೆಮಾ '೧೯೭೧- ಬಿಯಾಂಡ್ ಬಾರ್ಡರ್ಸ್' ಸಿನೆಮಾದಲ್ಲಿ ನಿರತರಾಗಿರುವುದಲ್ಲದೆ ಮುಂದಿನ ಸಿನೆಮಾ ಬಿ ಉನ್ನಿಕೃಷ್ಣನ್ ನಿರ್ದೇಶನದ ಚಿತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. 
೯೦ ರ ದಶಕದಲ್ಲಿ ಮೋಹನ್ ಲಾಲ್ ಮತ್ತು ಮಂಜು ವಾರಿಯರ್ ಹಲವು ಸಿನೆಮಾಗಳಲ್ಲಿ ನಟಿಸಿದ್ದಾರೆ. ಜನಪ್ರಿಯ ಆಭರಣ ಬ್ರಾಂಡ್ ಒಂದರ ಜಾಹಿರಾತಿನಲ್ಲಿ ಅಮಿತಾಬ್ ಮತ್ತು ಮಂಜು ಒಟ್ಟಿಗೆ ನಟಿಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com