'ಪ್ರೇಮದಲ್ಲಿ' ಅಮೀತ ಬದಲಿಗೆ ಅನುಷಾ

ನಿರ್ದೇಶಕ ಯೋಗರಾಜ್ ಭಟ್ ಗರಡಿಯಿಂದ ಹೊರಹೊಮ್ಮಿರುವ ಹರಿಪ್ರಸಾದ್ ಜಯಣ್ಣ ತಮ್ಮ ಚೊಚ್ಚಲ ನಿರ್ದೇಶನದ ಸಿನೆಮಾ 'ಪ್ರೇಮದಲ್ಲಿ' ತಾರಾಗಣದಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡಿದ್ದಾರೆ.
ಅನುಷಾ ರಂಗನಾಥನ್
ಅನುಷಾ ರಂಗನಾಥನ್
Updated on
ಬೆಂಗಳೂರು: ನಿರ್ದೇಶಕ ಯೋಗರಾಜ್ ಭಟ್ ಗರಡಿಯಿಂದ ಹೊರಹೊಮ್ಮಿರುವ ಹರಿಪ್ರಸಾದ್ ಜಯಣ್ಣ ತಮ್ಮ ಚೊಚ್ಚಲ ನಿರ್ದೇಶನದ ಸಿನೆಮಾ 'ಪ್ರೇಮದಲ್ಲಿ' ತಾರಾಗಣದಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡಿದ್ದಾರೆ. 
ಇದಕ್ಕೂ ಮೊದಲು ನಟಿಸಬೇಕಿದ್ದ ಅಮೀತ ಕುಲ್ಲಾಲ್, ದಿನಾಂಕಗಳು ಸರಿ ಹೊಂದದ್ದಕ್ಕೆ ಹೊರನಡೆದಿದ್ದಾರೆ. ಈಗ ಅವರನ್ನು ಅನುಷಾ ರಂಗನಾಥನ್ ಬದಲಿಸಿದ್ದಾರೆ. "ಅಮೀತ ಅವರ ದಿನಾಂಕ ನಮ್ಮ ಚಿತ್ರೀಕರಣಕ್ಕೆ ಹೊಂದಾಣಿಕೆ ಆಗದೆ ಹೋಗಿದ್ದರಿಂದ, ಅವರು ಈಗ ಸಿನೆಮಾ ತಂಡದಿಂದ ಹೊರನಡೆದಿದ್ದು ಈಗ ಅನುಷಾ ನಮ್ಮನ್ನು ಸೇರಿದ್ದಾರೆ" ಎನ್ನುತ್ತಾರೆ ಹರಿಪ್ರಸಾದ್. 
ವಿನೋದ್ ಗೌಡ ನಾಯಕನಟನಾಗಿ ನಟಿಸುತ್ತಿರುವ ಈ ಸಿನೆಮಾದಲ್ಲಿ ಇಬ್ಬರು ನಾಯಕ ನಟಿಯರು. ಅನುಷಾ ಜೊತೆಗೆ ಅಕ್ಷರ ಗೌಡ ಕೂಡ ನಟಿಸುತ್ತಿದ್ದಾರೆ. ಅಕ್ಷರ ಗೌಡ ಕೂಡ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದ ಅನುಷಾ ಈಗಾಗಲೇ 'ಸೋಡಾ ಬುಡ್ಡಿ', 'ಲೈಫ್ ೩೬೦' ಮತ್ತು 'ಒನ್ಸ್ ಮೋರ್ ಕೌರವ' ಸಿನೆಮಾಗಳಲ್ಲಿ ನಟಿಸಿದ್ದು, 'ಪ್ರೇಮದಲ್ಲಿ' ಅವರ ನಾಲ್ಕನೇ ಚಿತ್ರವಾಗಲಿದೆ. 
ಚೇತನ್ ಸಿನೆಮಾಗ ಸಂಗೀತ ನೀಡುತ್ತಿದ್ದು, ಸಂತೋಷ್ ರಾಯ್ ಪಾತಜೆ ಅವರ ಸಿನೆಮ್ಯಾಟೋಗ್ರಫಿ ಇದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com